ಮಂಗಳೂರು : ರಾಜ್ಯದಲ್ಲಿ ಕೋವಿಡ್ ನಡುವೆಯೂ ನವರಾತ್ರಿ ಸಂಭ್ರಮ ನಡೆಯುತ್ತಿದೆ.ಮಂಗಳೂರಿನಲ್ಲಿ ತುಸು ಜೋರಾಗಿಯೇ ದಸರಾ ಹಬ್ಬದ ಸಂಭ್ರದಲ್ಲಿರುವ ಜನ ದುರ್ಗೆಯ ಧ್ಯಾನದಲ್ಲಿದ್ದಾರೆ.ಕೊರೊನಾ ಕಾರಣದಿಂದಾಗಿ ಹಬ್ಬವನ್ನು ಸರಳವಾಗಿ ಆಚರಿಸಲಾಗುತ್ತಿದೆಯಾದರೂ ದೇವಾಲಯಗಳಲ್ಲಿ ಭಕ್ತರು ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡೆ ತಾಯಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ.ಇದರ ಮಧ್ಯೆ ಇಲ್ಲೊಬ್ಬ 9 ರ ಬಾಲೆ ನವದುರ್ಗೆಯರ ವೇಷದಲ್ಲಿ ಹಬ್ಬದ ಮೆರಗನ್ನು ಹೆಚ್ಚಿಸಿದ್ದಾಳೆ.
ಯಜಮಾನ ಇಂಡಸ್ಟ್ರೀಸ್ ನ ಮಾಲೀಕ ಟಿ ವರದರಾಜ್ ಪೈ, ಸಂಧ್ಯಾ ವರದರಾಜ್ ಪೈ ದಂಪತಿಯ ಪುತ್ರಿ ಒಂಬತ್ತು ವರ್ಷದ ಬಾಲಕಿ ವಿಷ್ಣುಪ್ರಿಯಾ ಪೈ ಮೂಡುಬಿದಿರೆಯ ರೋಟರಿ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಳೆ.ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ಉತ್ಸುಕಳಾದ ವಿಷ್ಣುಪ್ರಿಯಾ ಗಾಯನ, ನೃತ್ಯ, ಚಿತ್ರಕಲೆಯಲ್ಲಿ ಅತೀವ ಆಸಕ್ತಿ ಹೊಂದಿದ್ದಾಳೆ.ನವರಾತ್ರಿಯ ಸಂದರ್ಭದಲ್ಲಿ ವಿಷ್ಣುಪ್ರಿಯಾ ನವ ದೇವಿಯರಾದ ದೇವಿ ಮಾತಂಗಿ, ಬ್ರಹ್ಮಚಾರಿಣಿ, ಮಾತೆ ದುರ್ಗಾ, ಸರಸ್ವತಿ, ಸ್ಕಂದ ಮಾತಾ, ಲಕ್ಷ್ಮೀ, ಮಹಾಕಾಳಿ, ಮಹಾಗೌರಿ, ಶಾರದೆ ಸ್ವರೂಪಿಯಾಗಿ ಕಂಗೊಳಿಸಿದ್ದಾಳೆ.
ಪ್ರಸಾದನ ಕಲಾವಿದೆ ಶ್ರದ್ಧಾ ಅಶ್ವಿನಿ ಪ್ರಭು ಅವರು ವಿಷ್ಣುಪ್ರಿಯಾ ಪೈ ಅವರಿಗೆ ನವದೇವಿಯರ ಪ್ರಸಾದನವನ್ನು ಅದ್ಭುತವಾಗಿ ಮಾಡಿದ್ದಾರೆ.ದೇವರ ರೂಪದಲ್ಲಿರುವ ವಿಷ್ಣು ಪ್ರೀಯಾಳನ್ನಾ ನೀವೊಮ್ಮೆ ಕಣ್ತುಂಬಿಕೊಳ್ಳಿ
Kshetra Samachara
19/10/2020 03:55 pm