ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮಂಗಳೂರು ದಸರಾ ಮಹೋತ್ಸವಕ್ಕೆ ಚಾಲನೆ: " ನಮ್ಮ ದಸರಾ- ನಮ್ಮ ಸುರಕ್ಷೆ " ಘೋಷ ವಾಕ್ಯದಡಿ ಆಚರಣೆ

ಮಂಗಳೂರು: ನಗರದ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ‘ಮಂಗಳೂರು ದಸರಾ’ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.

ಕೊರೊನಾ ವಾರಿಯರ್, ಎನ್‌ಆರ್‌ಐ ಫೋರಂ ಮಾಜಿ ಉಪಾಧ್ಯಕ್ಷೆ ಆರತಿ ಕೃಷ್ಣ ಚಾಲನೆ ನೀಡಿದರು.ಕ್ಷೇತ್ರದ ಅಭಿವೃದ್ಧಿಯ ರೂವಾರಿ ಜನಾರ್ದನ ಪೂಜಾರಿ ಅವರ ಆಶಯದಂತೆ ಮಂಗಳೂರು ದಸರಾ ಮಹೋತ್ಸವ ‘ನಮ್ಮ ದಸರಾ-ನಮ್ಮ ಸುರಕ್ಷೆ’ ಘೋಷವಾಕ್ಯದಡಿ ನಡೆಯುತ್ತಿದೆ.

ಕೊರೊನಾ ವಾರಿಯರ್‌ ಆಗಿ ಅವಿರತ ಶ್ರಮಿಸಿದ ಆರತಿ ಕೃಷ್ಣ ಅವರನ್ನು ಮಂಗಳೂರು ದಸರಾ ಮಹೋತ್ಸದ ಚಾಲನೆಗೆ ಆಮಂತ್ರಿಸಲಾಗಿತ್ತು. ಬೆಳಿಗ್ಗೆ 9.30ಕ್ಕೆ ಗುರು ಪ್ರಾರ್ಥನೆ, 11.30ಕ್ಕೆ ಕಲಶ ಪ್ರತಿಷ್ಠೆ, ಮಧ್ಯಾಹ್ನ 12 ಗಂಟೆಗೆ ದಸರಾಕ್ಕೆ ಚಾಲನೆ, 12.30ಕ್ಕೆ ನವದುರ್ಗೆಯರ ಮತ್ತು ಶ್ರೀ ಶಾರದಾ ಪ್ರತಿಷ್ಠೆ, 12.30ಕ್ಕೆ ಪುಷ್ಪಾಲಂಕಾರ ಮಹಾಪೂಜೆ ನಡೆಯಿತು

Edited By : Manjunath H D
Kshetra Samachara

Kshetra Samachara

17/10/2020 06:10 pm

Cinque Terre

20.89 K

Cinque Terre

1

ಸಂಬಂಧಿತ ಸುದ್ದಿ