ಮಂಗಳೂರು: ಮಂಗಳೂರಿನ ಪಾವಂಜೆಯ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ, ಪಾವಂಜೆ ವತಿಯಿಂದ ನೂತನ ಯಕ್ಷಗಾನ ಮಂಡಳಿಯು ಅಕ್ಟೋಬರ್ 26 ರ ವಿಜಯದಶಮಿಯ ಶುಭ ಮುಹೂರ್ತದಲ್ಲಿ ಯಕ್ಷಗಾನ ಪ್ರದರ್ಶನದೊಂದಿಗೆ ಉದ್ಘಾಟನೆಗೊಳ್ಳಲಿದೆ. ಪುರಾತನ ಕಾಲದಿಂದಲೂ ಯಾಗ ಭೂಮಿಯೆಂದೇ ಪ್ರಸಿದ್ಧಿ ಪಡೆದ, ಮಹಾ ಯಾಗಗಳು ಯಶಸ್ವಿಯಾಗಿ ಸಂಪನ್ನಗೊಂಡ ಈ ಪುಣ್ಯ ಕ್ಷೇತ್ರದಲ್ಲಿ ಸುಮಾರು ಇನ್ನೂರು ವರ್ಷಗಳ ಹಿಂದೆಯೂ ಪ್ರಸಿದ್ಧ ಯಕ್ಷಗಾನ ಮೇಳ ಇದ್ದ ಬಗ್ಗೆ ಇತಿಹಾಸವಿದೆ.
ನೂತನ ಮೇಳದ ತಿರುಗಾಟವು ನವೆಂಬರ್ 27 ರಿಂದ ಆರಂಭಗೊಳ್ಳಲಿದ್ದು ಈಗಾಗಲೇ ಸುಮಾರು ಒಂದು ನೂರಕ್ಕೂ ಮಿಕ್ಕಿ ಸೇವಾರ್ಥಿಗಳು ನಮ್ಮ ಯಕ್ಷಗಾನ ಮಂಡಳಿಯ ಪ್ರದರ್ಶನವನ್ನು ಕಾದಿರಿಸಿದ್ದಾರೆ. ನೂತನ ಯಕ್ಷಗಾನ ಮಂಡಳಿಯಲ್ಲಿ ತೆಂಕು ತಿಟ್ಟಿನ ಪ್ರಖ್ಯಾತ ಹಿಮ್ಮೇಳ ಮತ್ತು ಮುಮ್ಮೇಳ ಕಲಾವಿದರು, ಪ್ರಧಾನ ಭಾಗವತರಾದ ಶ್ರೀ ಪಟ್ಲ ಸತೀಶ್ ಶೆಟ್ಟಿಯವರ ಸೂತ್ರಧಾರಿಕೆಯಲ್ಲಿ ಪ್ರದರ್ಶನವನ್ನು ಮುನ್ನಡೆಸಲಿದ್ದಾರೆ. ಯಕ್ಷಗಾನದ ಅಖ್ಯಾಯಿಕೆಯ ಪ್ರದರ್ಶನ, ಅದಕ್ಕೆ ಬೇಕಾದ ಸೂಕ್ತ ಕಲಾವಿದರ ಆಯ್ಕೆ ಹಾಗೂ ರಂಗೆ ಪ್ರಸ್ತುತಿ ಇತ್ಯಾದಿ ವಿಷಯಗಳಲ್ಲಿ ಪ್ರಧಾನ ಭಾಗವತರಿಗೆ ಪೂರ್ಣ ಜವಾಬ್ದಾರಿಯನ್ನು ವಹಿಸಿಕೊಡಲಾಗಿದ್ದು, ಮಂಡಳಿಯ ಸಂಘಟನೆ, ಆರ್ಥಿಕ ನಿರ್ವಹಣೆ, ನೀತಿ ನಿರೂಪಣೆ ಮತ್ತು ಆಡಳಿತ ಸಂಪೂರ್ಣವಾಗಿ ಶ್ರೀ ಕ್ಷೇತ್ರದ್ದಾಗಿರುತ್ತದೆ
Kshetra Samachara
17/10/2020 04:21 pm