ರಜತ ಮಹೋತ್ಸವದ ಪ್ರಯುಕ್ತ ಜಿಲ್ಲೆಯ ಪ್ರವಾಸೋದ್ಯಮದ ಚಟುವಟಿಕೆಗಳನ್ನು ಉತ್ತೇಜಿಸಲು ಹಾಗೂ ಪ್ರವಾಸಿಗರನ್ನು ಉಡುಪಿಗೆ ಆಹ್ವಾನಿಸುವ ಉದ್ದೇಶದಿಂದ ರಥಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಉಡುಪಿಯಿಂದ ಆರಂಭಗೊಳ್ಳುವ ಈ ರಥಯಾತ್ರೆ ಮೂರು ತಿಂಗಳಗಳ ಕಾಲ ರಾಜ್ಯಾದ್ಯಂತ ಸಂಚರಿಸಲಿದೆ ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದರು.
ಮಣಿಪಾಲದ ಖಾಸಗಿ ಹೊಟೇಲ್ನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವರು, ರಜತ ಮಹೋತ್ಸವದ ಸಮಾರೋಪ ಸಮಾರಂಭವು ಉಡುಪಿ ರಜತ ಉತ್ಸವ ಹೆಸರಿನಲ್ಲಿ ನಡೆಯಲಿದೆ. ದೊಡ್ಡಮಟ್ಟದ ಈ ಉತ್ಸವ ಜನರ ಕಾರ್ಯಕ್ರಮವೇ ಹೊರತು ಸರಕಾರಿ ಕಾರ್ಯಕ್ರಮವಲ್ಲ. ಅದೇ ರೀತಿ ಆ.25ರ ನಂತರ ಪ್ರತಿ ತಿಂಗಳ 25ರಂದು ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರದಲ್ಲೂ ಸಂಭ್ರಮದ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದರು.
ಜಿಲ್ಲೆ ರಚನೆಯಾಗಿ ಆ.25ಕ್ಕೆ 25ವರ್ಷ ಪೂರೈಸುತ್ತಿದ್ದು, ಈ ಹಿನ್ನೆಲೆ ಭಾರತ -75, ಉಡುಪಿ -25 ಎಂಬ ಶಿರ್ಷಿಕೆ ಯಡಿಯಲ್ಲಿ ಆ.25ರಿಂದ ಜ.25ರವರೆಗೆ ನಿರಂತರ ಆರು ತಿಂಗಳಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ರಜತ ಮಹೋತ್ಸವದ ಉದ್ಘಾಟನೆಯ ಪ್ರಯುಕ್ತ ಆ.25ರಂದು 3 ಗಂಟೆಗೆ ನಗರದ ಬೋರ್ಡ್ ಹೈಸ್ಕೂಲ್‌ನಿಂದ ಅಜ್ಜರಕಾಡಿನ ವರೆಗೆ ಬೃಹತ್ ಮೆರವಣಿಗೆ ಹೊರಡಲಿದೆ. ಬಳಿಕ ಅಜ್ಜರಕಾಡಿನ ಕ್ರೀಡಾಂಗಣದಲ್ಲಿ ರಜತ ಮಹೋತ್ಸವವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
Kshetra Samachara
20/08/2022 07:18 pm