ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ದ.ಕ ಜಿಲ್ಲೆಯಲ್ಲಿ ಸಂಭ್ರಮದ ಮೊಸರು ಕುಡಿಕೆ ಉತ್ಸವ, ಮೆರವಣಿಗೆಯಲ್ಲಿ ಗಮನ ಸೆಳೆದ ಸ್ತಬ್ಧ ಚಿತ್ರ ಟ್ಯಾಬ್ಲೊ..!

ದಕ್ಷಿಣ ಕನ್ನಡ ಜಿಲ್ಲೆಯಾದ್ಯಾಂತ ಶುಕ್ರವಾರ ಸಂಭ್ರಮದ ಮೊಸರು ಕುಡಿಕೆ ಉತ್ಸವ ನಡೆಯಿತು. 2 ವರ್ಷಗಳ ಬಳಿಕ ನಡೆದ ಈ ಉತ್ಸವದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಸಂಭ್ರಮಿಸಿದ್ರು,ತೊಕ್ಕೊಟ್ಟು ವೀರ ಮಾರುತಿ ವ್ಯಾಯಾಮ ಶಾಲೆ, ಅತ್ತಾವರ ಚಕ್ರಪಾಣಿ ಗೋಪಿನಾಥ ದೇವಸ್ಥಾನ ,ಕುಂಪಲ ಬಾಲಕೃಷ್ಣ ಮಂದಿರ ಉರ್ವ ಶ್ರೀ ಕೃಷ್ಣ ಜನ್ಮೋತ್ಸವ ಸಮಿತಿ, ಕಾವೂರು ಮಹಾಲಿಂಗೇಶ್ವರ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ,ಕುಲಶೇಖರ ವೀರನಾರಾಯಣ ದೇವಸ್ಥಾನ, ಗುರುಪುರ ಶ್ರೀ ಕೃಷ್ಣ ಮಂಡಳಿ ಸಮಿತಿಯಿಂದ ಉತ್ಸವ ನಡೆಯಿತು.

ಮೊಸರು ಕುಡಿಕೆ ಅಂಗವಾಗಿ ಸಂಜೆ ಸಮಯದಲ್ಲಿ ವೈಭವದ ಮೆರವಣಿಗೆ ಅರಂಭವಾಯಿತು.ಮೆರವಣಿಗೆಯುದ್ದಕ್ಕೂ ಪಿರಮಿಡ್ ರಚಿಸಿ ಮಡಕೆ ಒಡೆಯುವ ಮೂಲಕ ಯುವಕರು, ಯುವತಿಯರು ಸಂಭ್ರಮಿಸಿದ್ರು.ಮೊಸರು ಕುಡಿಕೆ ಒಡೆದು ಬಾಳೆಗೊನೆ,ಚಕ್ಕುಲಿ,ಸಿಹಿತಿಂಡಿಗಳನ್ನು ತೆಗೆದು ಸಂಭ್ರಮಿಸಿದ್ರು.ಮೆರವಣಿಗೆಯಲ್ಲಿ ಭಜನೆ, ವಾದ್ಯಘೋಷ,ವಿವಿಧ ಧಾರ್ಮಿಕ, ಸಾಂಸ್ಕೃತಿಕ ಪರಂಪರೆಯನ್ನು ಸಾರುವ ಟ್ಯಾಬ್ಲೊಗಳು ಎಲ್ಲಾರ ಗಮನಸೆಳೆಯಿತು.

ಮೆರವಣಿಗೆಯಲ್ಲಿ ದೇವರಿಗೆ ಭಕ್ತರು ಪೂಜೆ ಸಲ್ಲಿಸಿದರು ಮತ್ತು ನಾನಾ ಕಡೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸ್ಥಳೀಯ ಸಂಘ ಸಂಸ್ಥೆಗಳು ಅಯೋಜಿಸಿದ್ದರು.

ಒಟ್ಟಾರೆಯಾಗಿ ಈ ಬಾರಿಯ ಮೊಸರು ಕುಡಿಕೆ ಸಂಭ್ರಮ ಸಡಗರದಿಂದ ನಡೆದಿದೆ ಬಣ್ಣ ಬಣ್ಣದ ಓಕುಳಿ ಗಲ್ಲಿ ಮಿಂದೆದ್ದ ಯುವಕ ,ಯುವತಿಯರು ಎಂಜಾಯ್ ಮಾಡಿದ್ರು.

Edited By :
PublicNext

PublicNext

20/08/2022 02:44 pm

Cinque Terre

40.7 K

Cinque Terre

0

ಸಂಬಂಧಿತ ಸುದ್ದಿ