ಮುಲ್ಕಿ: ಎಂಎಸ್‌ಎಂಇ ಸಚಿವಾಲಯ ಮತ್ತು ಸುರತ್ಕಲ್‌ನ ಎನ್‌ಐಟಿಕೆ ಸಹಯೋಗದೊಂದಿಗೆ ಪಕ್ಷಿಕೆರೆ ಪೇಪರ್ ಸೀಡ್ ಸಂಸ್ಥೆಯ ನಿತಿನ್ ವಾಸ್ ಅವರ ಪೇಪರ್ ಸೀಡ್ ಗ್ರಾಮದ ಪರಿಕಲ್ಪನೆಗೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಸ್ವಉದ್ಯೋಗಕ್ಕೆ ಪ್ರೋತ್ಸಾಹ ನೀಡುವ ಕಾರ್ಯ ನಡೆಯಬೇಕಾಗಿದೆ. ಕೋವಿಡ್ ದಿನಗಳು ಎಲ್ಲರಿಗೂ ಪಾಠ ಕಲಿಸಿದ್ದು ಗ್ರಾಮಸ್ವರಾಜ್ಯ ನಿರ್ಮಾಣಕ್ಕೆ ಯುವಜನಾಂಗ ಮುಂದಾಗಿದೆ. ಪಕ್ಷಿಕೆರೆಯಲ್ಲಿ ಪೇಪರ್ ಸೀಡ್ ಗ್ರಾಮದ ಮುಖಾಂತರ ಸ್ವಉದ್ಯೋಗಕ್ಕೆ ಮುಂದಾಗಿರುವ ನಿತಿನ್ ವಾಸ್ ನವರಿಗೆ ಶುಭವಾಗಲಿ ಎಂದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಎನ್‌ಐಟಿಕೆ ಸುರತ್ಕಲ್‌ನ ಪ್ರೊಫೆಸರ್ ಡಾ. ಕೆ.ವಿ.ಗಂಗಾಧರನ್, ಅಸಿಸ್ಟೆಂಟ್ ಪ್ರೊಫೆಸರ್ ಡಾ. ಬಿಜುನಾ ಸಿ ಮೋಹನ್, ಕೆಮ್ರಾಲ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಲೀಲಾ ಕೃಷ್ಣಪ್ಪ ಪೂಜಾರಿ, ಪಕ್ಷಿಕೆರೆ ಪೇಪರ್ ಸೀಡ್ ಸಂಸ್ಥೆಯ ನಿತಿನ್ ವಾಜ್, ಪರಿಸರವಾದಿ ಜೀತ್ ರೋಚ್, ನೆಹರು ಯುವಕೇಂದ್ರದ ರಘುವೀರ್ ಸೂಟರ್ ಪೇಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಂಗ ಕಲಾವಿದರಾದ ಮಣಿನಾಲ್ಕೂರು ಅವರಿಂದ ತತ್ವಪದಗಳು ನಡೆಯಿತು.
Kshetra Samachara
23/04/2022 09:11 pm