ಉಡುಪಿ: ಉಡುಪಿಯಲ್ಲಿ ಮಾ.20 ರಂದು ರಾಜ್ಯಮಟ್ಟದ ಜಲಜಾನಪದೋತ್ಸವ-2022 ಕಾರ್ಯಕ್ರಮ ಮರವಂತೆ ಸಮುದ್ರ ಕಿನಾರೆ ಸಮೀಪ ನಡೆಯಲಿದೆ ಎಂದು ಜಾನಪದ ಪರಿಷತ್ ಅಧ್ಯಕ್ಷರು ಮಾಹಿತಿ ನೀಡಿದರು.
ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ,ಒಂದು ದಿನದ ಜಲಜಾನಪದ ಉತ್ಸವದ ಸಮಾರಂಭವು ಜಾನಪದೀಯವಾದ ಸಮುದ್ರ ಪೂಜೆ, ಜಲಪೂಜೆಯೊಂದಿಗೆ ಆರಂಭವಾಗಿ ಮರವಂತೆಯ ಮಹಾರಾಜಸ್ವಾಮಿ ದೇವಸ್ಥಾನದಿಂದ ಸಮಾರಂಭದ ಸಭಾಂಗಣಕ್ಕೆ ಮೆರವಣಿಗೆಯೊಂದಿಗೆ ಆರಂಭವಾಗುವುದು.
ಸ್ಥಳೀಯ ಗ್ರಾಮಪಂಚಾಯತ್ ಅಧ್ಯಕ್ಷೆ ಶ್ರೀಮತಿ ರುಕ್ಮಿಣಿ ರಾಷ್ಟ್ರಧ್ವಜಾರೋಹಣ ಮಾಡುತ್ತಾರೆ. ಬಳಿಕ ಸಮಾರಂಭವನ್ನು ಮೀನುಗಾರಿಕಾ ಸಚಿವರು ಮತ್ತು ಉಸ್ತುವಾರಿ ಮಂತ್ರಿ ಎಸ್.ಅಂಗಾರ ಅವರು ಉದ್ಘಾಟಿಸುತ್ತಾರೆ.
ವಿವಿಧ ವಸ್ತು ಪ್ರದರ್ಶನಗಳನ್ನು ಸಚಿವ ಸುನೀಲ್ ಕುಮಾರ್ ,ಸಂಸದ ರಾಘವೇಂದ್ರ ಮತ್ತು ಸ್ಥಳೀಯ ಶಾಸಕ ಸುಕುಮಾರ್ ಶೆಟ್ಟಿ ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು
Kshetra Samachara
09/03/2022 05:15 pm