ಮುಲ್ಕಿ: ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ತಮ್ಮ ಜನ್ಮದಿನವನ್ನು ಮುಲ್ಕಿ ನ.ಪಂ. ಪೌರಕಾರ್ಮಿಕರ ಜೊತೆ ಆಚರಿಸಿ ಮಾದರಿಯಾಗಿದ್ದಾರೆ. ಶನಿವಾರ ಮಧ್ಯಾಹ್ನ ಮುಲ್ಕಿ ನಪಂ ಸಮುದಾಯ ಭವನದಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್ ಹಾಗೂ ಮುಲ್ಕಿ ನಪಂ ಪೌರಕಾರ್ಮಿಕರು ಮಿಥುನ್ ರೈ ಅವರಿಗೆ ಕೇಕ್ ತಿನ್ನಿಸುವ ಮೂಲಕ ಜನ್ಮದಿನ ಆಚರಿಸಲಾಯಿತು.
ಬಳಿಕ ಪೌರಕಾರ್ಮಿಕರ ಯೋಗಕ್ಷೇಮ ವಿಚಾರಿಸಿದ ಮಿಥುನ್ ರೈ, ಕೊರೊನಾ ಆರಂಭ ದಿನಗಳಲ್ಲಿ ಮುಲ್ಕಿ ನಪಂ ಪೌರಕಾರ್ಮಿಕರ ಕಾರ್ಯಕ್ಷಮತೆ ಶ್ಲಾಘಿಸಿ, ಕೊರೊನಾದಿಂದ ಎಚ್ಚರಿಕೆ ಯಲ್ಲಿರುವಂತೆ ಸೂಚಿಸಿದರು. ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ಕೆಪಿಸಿಸಿ ಸದಸ್ಯ ವಸಂತ ಬರ್ನಾಡ್, ಯುವ ಕಾಂಗ್ರೆಸ್ ಅಧ್ಯಕ್ಷ ಹಕೀಂ ಕಾರ್ನಾಡು, ಮುಲ್ಕಿ ನಪಂ ಸದಸ್ಯರಾದ ಪುತ್ತುಬಾವ,ವಿಮಲಾ ಪೂಜಾರಿ, ಬಾಲಚಂದ್ರ ಕಾಮತ್, ಯೋಗೀಶ್ ಕೋಟ್ಯಾನ್, ಮಂಜುನಾಥ ಕಂಬಾರ, ಸಂದೀಪ್ ಕುಮಾರ್,ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಅಜೀಜ್ ಹಳೆಯಂಗಡಿ, ಧರ್ಮಾನಂದ ತೋಕೂರು, ದಿನೇಶ್ ಸುವರ್ಣ ಪಡುಪಣಂಬೂರು,ಅಶೋಕ್ ಪೂಜಾರ, ರಕ್ಷಿತ್ ಕೊಳಚಿಕಂಬಳ, ಪ್ರಕಾಶ್ ಆಚಾರ್ಯ ಕಿನ್ನಿಗೊಳಿ, ಚಂದ್ರಶೇಖರ ಗೋಳಿಜೋರ, ಸಮೀರ್ ಕೆಎಸ್ ರಾವ್ ನಗರ, ಬಶೀರ್ ಕುಳಾಯಿ ಉಪಸ್ಥಿತರಿದ್ದರು. ಅಶೋಕ್ ಸ್ವಾಗತಿಸಿ, ನಿರೂಪಿಸಿದರು. ಬಳಿಕ ನಪಂ ನೌಕರರ ಜೊತೆ ಮಿಥುನ್ ರೈ ಭೋಜನ ಸವಿದರು.
Kshetra Samachara
03/10/2020 04:30 pm