ಮಂಗಳೂರು: ಇಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ಟೂರಿಸಂ ಡೇ ತಣ್ಣೀರುಬಾವಿ ಬೀಚ್ ನಲ್ಲಿ ನಡೆಯಿತು.
ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ದಿನಾಚರಣೆಯನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿದರು. ಇದೇ ವೇಳೆ
ಜಿಲ್ಲಾಧಿಕಾರಿಯವರು ವಿದ್ಯಾರ್ಥಿಗಳನ್ನು ಕರೆದು ಗಿಡಕ್ಕೆ ನೀರು ಹಾಕಿಸುವ ಮೂಲಕ "ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು" ಎಂಬ ಸಂದೇಶ ನೀಡಿದರು. ಟೂರಿಸಂನಿಂದ ಜಿಡಿಪಿ ಜಾಸ್ತಿ ಇರುತ್ತದೆ. ಆದರೆ, ಕೋವಿಡ್ ನಿಂದ ನಕಾರಾತ್ಮಕ ಪರಿಣಾಮ ಟೂರಿಸಂ ಮೇಲೆ ಬೀರಿದೆ. ಕೋವಿಡ್ ಬಂದ ನಂತರ ಜನರ ಮನೋಭಾವದಲ್ಲಿ ಬದಲಾವಣೆ ಆಗಿದೆ. ಪ್ರವಾಸಿ ತಾಣಗಳ ಸ್ಥಿತಿ ಬದಲಾಗಿವೆ.
ನಮ್ಮಲ್ಲಿ ಅನೇಕ ಸಾಂಪ್ರದಾಯಿಕ ಕಲೆಗಳಿದ್ದು, ಕೆಲವು ಅಳಿವಿನಂಚಿನಲ್ಲಿದೆ. ಅದಕ್ಕೆ ಜೀವ ಕೊಡುವ, ಅಂತಹ ಕಲೆಗಳನ್ನು ಅಭಿವೃದ್ಧಿಪಡಿಸೋ ಕಾರ್ಯ ಮಾಡಲಿದ್ದೇವೆ ಅಂದರು. ಇದೇ ವೇಳೆ ಬೀಚ್ ವಾಲಿಬಾಲ್ ನಲ್ಲಿ ವಿಜೇತ ತಂಡಗಳಿಗೆ ಬಹುಮಾನ ನೀಡಲಾಯಿತು.
Kshetra Samachara
27/09/2020 12:53 pm