ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರದಲ್ಲಿ ರಾಜ್ಯ ಮಟ್ಟದ ಮುದ್ದು ಕೃಷ್ಣ ಸ್ಪರ್ಧೆ : ಮುದ್ದು ಕೃಷ್ಣನ ವೇಷದಲ್ಲಿ ಮುಸ್ಲಿಂ ಮಕ್ಕಳು

ಬ್ರಹ್ಮಾವರ : ನವಕಿರಣ್ ಕ್ರೀಡಾ ಹಾಗೂ ಸಾಂಸ್ಕೃತಿಕ ವೇದಿಕೆ , ನವಕಿರಣ್ ನವತಾರೆ ಸೇವಾ ವೇದಿಕೆ ಬ್ರಹ್ಮಾವರ ಇವರ ಆಶ್ರಯದಲ್ಲಿ 28 ನೇ ವರ್ಷದ ರಾಜ್ಯ ಮಟ್ಟದ ಮುದ್ದು ಕೃಷ್ಣ ಸ್ಪರ್ಧೆ ಬ್ರಹ್ಮಾವರ ಭಂಟರ ಭವನದಲ್ಲಿ ನಡೆಯಿತು.

ಶಂಕರಪುರ ಸಾಯಿಮಂದಿರದ ಶ್ರೀ ಸಾಯಿ ಈಶ್ವರ ಸ್ವಾಮಿಜೀ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

3 ವಿಭಾಗದ ಸ್ಪರ್ಧೆಯಲ್ಲಿ ಕಾರ್ಯಕ್ರಮ ದಲ್ಲಿ 3 ಮುಸ್ಲಿಂ ಸಮುದಾಯದ ಮಕ್ಕಳಾದ ನಿಮ್ರಾ,ಉಮೇರ್ರಾ ಹಾಗೂ ಮುಹೀರಾ ಸೇರಿದಂತೆ 331 ಮಕ್ಕಳು ಶ್ರೀ ಕೃಷ್ಣನ ನಾನಾ ಲೀಲೆಯಿಂದ ಕಂಗೊಳಿಸಿದರು.

ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ರಾಜೇಶ್ ಶೆಟ್ಟಿ ಬಿರ್ತಿ ಅಧ್ಯಕ್ಷತೆ ವಹಿಸಿದ್ದರು. ಸಮಾಜಸೇವಕ ಪ್ರಖ್ಯಾತ ಶೆಟ್ಟಿ, ಸವಿತಾ ಶೆಣೈ, ನವಕಿರಣದ ಅಧ್ಯಕ್ಷ ಗಿರೀಶ್.ಬಿ. ಕಾರ್ಯದರ್ಶಿ ಉಮೇಶ ಪೂಜಾರಿ, ನವತಾರೆಯ ಅಧ್ಯಕ್ಷೆ ಅನುರಾಧ ವಿಘ್ನೇಶ್ ಉಪಸ್ಥಿತರಿದ್ದರು.

Edited By : Somashekar
Kshetra Samachara

Kshetra Samachara

23/08/2022 06:55 pm

Cinque Terre

4.36 K

Cinque Terre

0

ಸಂಬಂಧಿತ ಸುದ್ದಿ