ವರದಿ :ದಾಮೋದರ ಮೊಗವೀರ ನಾಯಕವಾಡಿ
ಬೈಂದೂರು: ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಉಪ್ಪುಂದ.ಇದರ ಮಾಲೀಕರಾದ ಯುವ ಉದ್ಯಮಿ ಗೋವಿಂದ ಬಾಬು ಪೂಜಾರಿಯವರ ಹುಟ್ಟುಹಬ್ಬದ ದಿನದಂದು ಬೈಂದೂರು ತಾಲೂಕಿನ ಉಪ್ಪುಂದ ಶಾಲೆ ಬಾಗಿಲು ಚಿಕ್ಕುಮನೆ ಇಂದಿರಾ ಗಾಣಿಗ ಇವರಿಗೆ ಟ್ರಸ್ಟ್ ವತಿಯಿಂದ ನಿರ್ಮಿಸಲಾದ ನೂತನ ಗ್ರಹದ ಕೀ ಯನ್ನು ಹಸ್ತಾಂತರಿಸಿದರು.
26-6-2022 (ಆದಿತ್ಯವಾರ) ತಮ್ಮ ಹುಟ್ಟುಹಬ್ಬದ ಸವಿ ನೆನಪಿಗೆ ನೂತನ ಮನೆಯನ್ನುಆಶ್ರಯದಾತ ಕೊಡುಗೈ ದಾನಿ ಯುವ ಉದ್ಯಮಿ ಡಾ.ಗೋವಿಂದ ಬಾಬು ಪೂಜಾರಿಯವರು ಬಡ ಮಹಿಳೆಗೆ ಮನೆ ನಿರ್ಮಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.
ಹೌದು ಉಪ್ಪುಂದ ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಉಪ್ಪುಂದ ಶೈಕ್ಷಣಿಕ ಸಾಮಾಜಿಕ ಹಾಗೂ ಅನ್ನ ಆಶ್ರಯ ಜನಸೇವೆ ಸಂಸ್ಥೆಯಾಗಿದ್ದು. ಉಪ್ಪುಂದ ಶಾಲೆ ಬಾಗಿಲು ಚಿಕ್ಕುಮನೆ ಇಂದಿರಾ ಗಾಣಿಗ ತನ್ನ ಎರಡು ಮಕ್ಕಳೊಂದಿಗೆ ಅತಿ ಕಷ್ಟಕರವಾದ ಜೀವನ ಸಾಗಿಸುತ್ತಿದ್ದರು. ಇಂಥ ಕಷ್ಟದ ಸ್ಥಿತಿಯಲ್ಲಿ ಇರುವ ಅಸಹಾಯಕತೆ ತಿಳಿದು ಸ್ಥಳೀಯ ಯುವಕರು ಗೋವಿಂದ ಬಾಬು ಪೂಜಾರಿ ಯವರ ಗಮನಕ್ಕೆ ತಂದು ತಕ್ಷಣ ಗೋವಿಂದ ಬಾಬು ಪೂಜಾರಿ ಯವರು ಸ್ವತಃ ಸ್ಥಳಕ್ಕೆ ಭೇಟಿಕೊಟ್ಟು ನಿರ್ಗತಿಕ ಆಶ್ರಯ ವಂಚಿತ ಬಡ ಕುಟುಂಬದ ಕಷ್ಟ ಅರಿತು.
ಇಂದಿರಾ ಗಾಣಿಗ 1 ಗಂಡು 1 ಹೆಣ್ಣು ಮಗುವಿನ ಜೊತೆಗೆ ಸಂಪೂರ್ಣ ಶಿಥಿಲ ವ್ಯವಸ್ಥೆಯ ಗುಡಿಸಲಿನಲ್ಲಿ ಜೀವನ ನಡೆಸುತ್ತಿದ್ದರು. ಗುಡಿಸಲಲ್ಲೇ ಇದ್ದು ಪುಟ್ಟ ಮನೆಯ ಕನಸು ಕಾಣುತ್ತಿದ್ದರು. ಆದರೆ ಮನೆ ಕಟ್ಟುವ ಕನಸಿಗೆ ಬಡತನ ತೊಡಕಾಗಿತ್ತು. ಕನಸು ನನಸಾಗದೆ ಹಾಗೆಯೇ ಉಳಿದಿತ್ತು .
ತನ್ನ ಹುಟ್ಟುಹಬ್ಬದ ದಿನದಂದ ನಿನ್ನೇ ಬೆಳಿಗ್ಗೆ ಶುಭ ಸಂದರ್ಭದಲ್ಲಿ "ಶ್ರೀ ವರಲಕ್ಷ್ಮಿ ನಿಲಯ " ಗೃಹಪ್ರವೇಶ ನೆರವೇರಿಸಿ ಮನೆಯ ಕೀಯನ್ನು ಫಲನುಭವಿಗಳಿಗೆ ಕೈಗೆ ಹಸ್ತಾಂತರ ಮಾಡಿದರು .
ಡಾ .ಗೋವಿಂದಬಾಬು ಪೂಜಾರಿಯವರ ಪೂರ್ಣ ವೆಚ್ಚದಲ್ಲಿ ಸಂಪೂರ್ಣ ಸುಸಜ್ಜಿತ ಮನೆ ನಿರ್ಮಿಸಿಕೊಟ್ಟು ಇಂದು ಇದು "8 ನೇ ಮನೆ" ಇದಾಗಿದ್ದು ಶ್ರೀ ವರಲಕ್ಷ್ಮಿ ನಿಲಯದ ಗೃಹ ಪ್ರವೇಶೋತ್ಸವ ಕೇರಳದ ಶಿವಗಿರಿ ಮಠದ ಪೀಠಾಧಿಪತಿ ಸತ್ಯನಂದ ಸ್ವಾಮೀಜಿ ಯವರು ನೂತನ ಮನೆ ಗೃಹಪ್ರವೇಶ ಉದ್ಘಾಟನೆ ನೆರವೇರಿಸಿ ಆಶೀರ್ವದಿಸಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಧಾರ್ಮಿಕ ಮುಖಂಡ ಬಸ್ರೂರು ಅಪ್ಪಣ್ಣ ಹೆಗ್ಗಡೆ, ಉಡುಪಿ ಜಿಲ್ಲಾ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಚಾಲಕ ಡಾ ನಾರಾಯಣ ಶೆಣೈ. ರಾಜ್ಯ ಬಿಜೆಪಿ ಮಹಿಳಾ ಘಟಕದ ಉಪಾಧ್ಯಕ್ಷೆ ಗೀತಾಂಜಲಿ ಸುವರ್ಣ, ವಾಸ್ತು ತಜ್ಞ ಹಾಗೂ ಯಕ್ಷಗಾನದ ಅಂಕಣಗಾರ ಬಸವರಾಜ್ ಶೆಟ್ಟಿಗಾರ್, ಕುಂದಾಪುರ ತಾಲೂಕು ಗಾಣಿಗ ಸಂಘದ ಅಧ್ಯಕ್ಷ ಪ್ರಭಾಕರ್ ಕುಂಭಾಸಿ, ಇಂದಿರಾ ಗಾಣಿಗ ಅವರ ಮನೆಯವರು ಹಾಗೂ ಡಾ. ಗೋವಿಂದ ಬಾಬು ಪೂಜಾರಿ ಯವರ ಅಭಿಮಾನಿಗಳು ಮತ್ತು ಊರಿನ ಸಾರ್ವಜನಿಕರು ಉಪಸ್ಥಿತರಿದ್ದರು
ವೇದಿಕೆಯಲ್ಲಿ ಡಾ. ಗೋವಿಂದ ಬಾಬು ಪೂಜಾರಿ ದಂಪತಿಗೆ ಗಾಣಿಗ ಸಂಘದ ವತಿಯಿಂದ ಸನ್ಮಾನಿಸಲಾಯಿತು.
Kshetra Samachara
27/06/2022 04:03 pm