ಕೋಟ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೆ. ಶಿವರಾಮ ಕಾರಂತ ಅವರದು ಕನ್ನಡ ಸಾರಸ್ವತ ಲೋಕ ಸದಾ ನೆನಪಿನಲ್ಲಿಡೋ ಮೇರು ವ್ಯಕ್ತಿತ್ವ. ಶಿವರಾಮ ಕಾರಂತರ ಸಾಧನೆ ಹಾಗೂ ಅವರ ವಿಚಾರಧಾರೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನವನ್ನು ಉಡುಪಿ ಜಿಲ್ಲೆಯಲ್ಲಿರೋ ಕೋಟ ಥೀಮ್ ಪಾರ್ಕ್ ಮಾಡುತ್ತಿದೆ.
ಥೀಮ್ ಪಾರ್ಕ್ ಮುಂಭಾಗವೇ ಯಕ್ಷಗಾನ ಕಲಾಕೃತಿಗಳು ನಿಮ್ಮನ್ನು ಸ್ವಾಗತಿಸುತ್ತದೆ. ಅದರೊಂದಿಗೆ ಹಳ್ಳಿಯ ಸೊಬಗು, ಹಾಗೇ ಕಾರಂತ ಗ್ಯಾಲರಿಯಲ್ಲಿ ಅವರ ಯಕ್ಷಗಾನ, ನಾಟಕ ಭಂಗಿಯ ಅಪರೂಪದ ಚಿತ್ರಗಳನ್ನು ಕಾಣಬಹುದಾಗಿದೆ. ಹಾಗೇ ಈ ಥೀಮ್ ಪಾರ್ಕ್ ನಲ್ಲಿ ಕಾರಂತರ ಪುಸ್ತಕ ಹಾಗೂ ಇನ್ನಿತರ ಯುವ ಲೇಖಕರ ಪುಸ್ತಕಗಳನ್ನು ನೋಡಬಹುದು.
ಥೀಮ್ ಪಾರ್ಕ್ ನಲ್ಲಿರುವ ಸಭಾಂಗಣದಲ್ಲಿ ಯಕ್ಷಗಾನ, ನಾಟಕೋತ್ಸವ ನಡೆಯುತ್ತಿರುತ್ತದೆ. ಕಾರಂತರ ನಡೆ- ನುಡಿ ಹಾಗೇ ಕಲೆ ಮೇಲೆ ಅವರಿಗಿದ್ದ ಶ್ರದ್ಧೆ, ಪ್ರೀತಿ ಇವೆಲ್ಲವೂ ಮುಂದಿನ ಯುವ ಪೀಳಿಗೆಗೆ ಆದರ್ಶ, ಮಾರ್ಗದರ್ಶನ ಎನ್ನುತ್ತಾರೆ ಥೀಮ್ ಪಾರ್ಕ್ ನ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ.
PublicNext
30/03/2022 08:48 pm