ಉಡುಪಿ: ಗಣೇಶನ ಹಬ್ಬದ ಅದ್ಧೂರಿತನಕ್ಕೆ ಕೊರೋನಾ ವಿಘ್ನ ತಂದಿದೆ.ಆದರೂ ಆಚರಣೆಗೆ ಅಡಚಣೆಯಾಗಿಲ್ಲ. ಉಡುಪಿಯಲ್ಲಿ ಗಣೇಶನ ಮೂರ್ತಿಗೆ ಈ ಬಾರಿ ಬೇಡಿಕೆ ಜಾಸ್ತಿಯಾಗಿದೆ ಅಂತಾರೆ ಮೂರ್ತಿ ತಯಾರಕರು.
ಹೌದು...ಸಾಂಕ್ರಾಮಿಕ ರೋಗ ಇರುವ ಕಾರಣಕ್ಕೆ ರಾಜ್ಯ ಸರಕಾರ ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ತಂದಿದೆ. ಗಣೇಶೋತ್ಸವನ್ನು ನಿಯಮಬದ್ಧವಾಗಿ ಆಚರಿಸಬೇಕು ಎಂದು ಆದೇಶ ಹೊರಡಿಸಿದೆ. ಸಾರ್ವಜನಿಕವಾಗಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬಾರದು ಎಂಬುದು ನಿಯಮ.
ಸಾರ್ವಜನಿಕ ಆಚರಣೆ ಇಲ್ಲದಿದ್ದರೇನು? ನಾವು ಮನೆಯಲ್ಲೇ, ನಮ್ಮ ಸಂಘ ಸಂಸ್ಥೆಯಲ್ಲೇ ಗಣಪತಿ ಕೂರಿಸುತ್ತೇವೆ ಎಂದು ಉಡುಪಿ ಜನ ನಿರ್ಧಾರ ಮಾಡಿದ್ದಾರೆ.ಹೀಗಾಗಿ ಈ ವರ್ಷ ಗಣೇಶನ ಮೂರ್ತಿಯ ಗಾತ್ರ ಸಣ್ಣದಾಗಿದೆ,ಆದರೆ ಬೇಡಿಕೆ ಹೆಚ್ಚಾಗಿದೆ ಅಂತಾರೆ ಮೂರ್ತಿ ತಯಾರಕರು.
ಹೆಚ್ಚು ಜನ ಸೇರಿ ಗಣೇಶೋತ್ಸವ ಆಚರಿಸಬಾರದು, ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ನಿಯಮ ಪಾಲಿಸಬೇಕು ಎಂಬ ಹಿನ್ನೆಲೆಯಲ್ಲಿ ಈ ಬಾರಿ ಪ್ರತಿ ವರ್ಷಕ್ಕಿಂತ ಕಡಿಮೆ ಗಾತ್ರದ ಗಣಪತಿಗಳನ್ನು ತಯಾರಿಸುವಂತೆ ಕಲಾವಿದರಿಗೆ ಆಯೋಜಕರು ಆರ್ಡರ್ ಕೊಟ್ಟಿದ್ದಾರೆ. ಕಾರ್ಮಿಕರಿಗೆ ಸಹಾಯಕರಿಗೆ ಕಡಿಮೆ ಕೆಲಸ ಆದರೂ ಗಣಪತಿ ಮೂರ್ತಿಗಳ ಸಂಖ್ಯೆ ಹೆಚ್ಚಾಗಿದೆ.ಉಡುಪಿಯಲ್ಲಿ ಕಳೆದ ಐವತ್ತು ವರ್ಷಗಳಿಂದ ಮೂರ್ತಿ ತಯಾರಿಸುವ ಕುಟುಂಬವಿದ್ದು ,ಅವರಿಗೆ ಈ ವರ್ಷ ಕೈತುಂಬ ಕೆಲಸ ಇದೆ.
ಒಟ್ಟಾರೆ ದೇವರ ಆರಾಧನೆಗೆ ಯಾವ ಕೊರೋನಾ ಬಂದರೂ ಆಸ್ತಿಕರು ತಲೆ ಕೆಡಿಸಿಕೊಂಡಂತಿಲ್ಲ,ತಮ್ಮಮನೆಗಳಲ್ಲಿ ,ಮನಗಳಲ್ಲಿ ಗಣೇಶನ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ.
Kshetra Samachara
10/09/2021 06:16 pm