ಮೂಡುಬಿದಿರೆ: ಲೀಫ್ ಆರ್ಟಿಸ್ಟ್ ಅಕ್ಷಯ್ ಕೋಟ್ಯಾನ್ ಕಲ್ಲಬೆಟ್ಟು ಅವರು ಅಂಜೂರದ ಎಲೆಯಲ್ಲಿ ಬಿಡಿಸಿದ ಚಾರ್ಲಿ ಚಾಪ್ಲಿನ್‌ರ 1x1.7 ಸೆಂ.ಮೀ. ಅಳತೆಯ ಚಿತ್ರವು ವಿಶೇಷ ಲೀಫ್ ಆರ್ಟ್ `ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್'ಗೆ ಸೇರ್ಪಡೆಗೊಂಡಿದೆ.
ಅಕ್ಷಯ್ ಕೋಟ್ಯಾನ್ ಆಳ್ವಾಸ್ ಪದವಿ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ವಿಷುವಲ್ ಆರ್ಟ್ಸ್ನ ಮೂರನೇ ವರ್ಷದ ವಿದ್ಯಾರ್ಥಿ. ಬ್ರಹ್ಮಶ್ರೀ ನಾರಾಯಣ ಗುರು, ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ. ಡಿ.ವೀರೇಂದ್ರ ಹೆಗ್ಗಡೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉದ್ಯಮಿ ವಿಜಯ್ ಸಂಕೇಶ್ವರ, ನಟರಾದ ದರ್ಶನ್, ಯಶ್, ಗೋಲ್ಡನ್ ಸ್ಟಾರ್ ಗಣೇಶ್, ರಕ್ಷಿತ್ ಶೆಟ್ಟಿ, ಅರವಿಂದ ಬೋಳಾರ್, ಅನಿರುದ್ಧ್, ಜಗ್ಗೇಶ್, ಶಾಸಕರಾದ ಹರೀಶ್ ಪೂಂಜ, ವೇದವ್ಯಾಸ ಕಾಮತ್, ಉಮಾನಾಥ್ ಕೋಟ್ಯಾನ್ ಸೇರಿದಂತೆ 200 ಕ್ಕೂ ಅಧಿಕ ಸಾಧಕರ ಪೋಟ್ರೇಟ್‌ಗಳಿಗೆ ಅಕ್ಷಯ್ ತಮ್ಮ ಲೀಫ್ ಆರ್ಟ್ ಮೂಲಕ ಜೀವ ನೀಡಿದ್ದಾರೆ.
Kshetra Samachara
19/08/2021 01:57 pm