ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಮಾನವೀಯತೆಯ ಮೌಲ್ಯಗಳ ಕುರಿತು ಬೀದರ್ ನಿಂದ ಹೊರಟ ಜನಜಾಗೃತಿ ಪಾದಯಾತ್ರೆ ಮುಲ್ಕಿಯಲ್ಲಿ

ಮುಲ್ಕಿ: ಮಾನವೀಯ ಮೌಲ್ಯಗಳ ಬಗ್ಗೆ ಸಮಾಜಕ್ಕೆ ಜಾಗೃತಿ ಮೂಡಿಸುವ ಕುರಿತು ಕನ್ನಡ ಕಿರುತೆರೆ ನಟ, ನಿರ್ದೇಶಕರು, ಟಿವಿ ಜಾಹೀರಾತು ನಿರ್ಮಾಣಗಾರರು ಹಾಗೂ ಉತ್ತಮ ಲೇಖಕರೂ ಚಿಂತಕರಾದ ವಿವೇಕಾನಂದ ಎಚ.ಕೆ.' ರವರು ಕಳೆದ ನವೆಂಬರ್ 1,ರಂದು ಬೀದರ್ ಜಿಲ್ಲೆಯಿಂದ ಹೊರಟ ಜ್ಞಾನಬಿಕ್ಷಾ ಪಾದಾಯಾತ್ರೆಯು, ಹಲವಾರು ಜಿಲ್ಲೆ, ತಾಲೂಕು-ಕೇಂದ್ರಗಳನ್ನು ದಾಟಿ ಉಡುಪಿ ಮೂಲಕ ದಕ್ಷಿಣಕನ್ನಡ ಜಿಲ್ಲೆ ತಲುಪಿದರು

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ದಕ್ಷಿಣ ಕನ್ನಡ ಜಿಲ್ಲೆಯ ಅಧ್ಯಕ್ಷರು, ಸದಸ್ಯರು ಮತ್ತಿತರರು ದ.ಕ. ಜಿಲ್ಲೆಯ ಗಡಿಭಾಗದ ಮುಲ್ಕಿ ಯಲ್ಲಿ ಸ್ವಾಗತಿಸಿದರು

ಪಾದಯಾತ್ರೆಯಲ್ಲಿ ಹೊರಟ ವಿವೇಕಾನಂದರು ತಮ್ಮ ಅನುಭವದ ಬಗ್ಗೆ ಮಾತನಾಡಿ ಪ್ರತಿ ದಿನ 30 ರಿಂದ 40 ಕಿ.ಮಿ. ಕಾಲ್ನಡಿಗೆಯಲ್ಲಿ ಸಾಗುತ್ತಾ ನಿರಂತರವಾಗಿ ಇದುವರೆಗೆ 280 ದಿನದಲ್ಲಿ 8500 ಕಿ.ಮಿ. ನಡಿಗೆಯಲ್ಲಿ ಮಂದಿರ ಮಠಗಳು ಮತ್ತು ದಾರಿಯುದ್ದಕ್ಕೂ ಶಾಲಾ ಕಾಲೇಜುಗಳು, ಯುವಕ ಯುವತಿ ಮಂಡಲಗಳು, ಸಂಘ ಸಂಸ್ಥೆಗಳ ಆಶ್ರಯದಲ್ಲಿ ನೂರಾರು ಭಾಷಣ, ಉಪನ್ಯಾಸಗಳನ್ನು ಕೂಡಾ ನೀಡಿದ್ದೇನೆ.

ವಿಶೇಷ ಸ್ಥಳಗಳಿಗೆ ಭೇಟಿ ನೀಡಿ ಮಾನವೀಯ ಮೌಲ್ಯಗಳನ್ನು ತುಂಬುವ ಮತ್ತು ಪ್ರಬುದ್ಧ ಸಮಾಜವನ್ನು ನಿರ್ಮಾಣ ಮಾಡುವ ಕುರಿತು ಜಾಗೃತಿ ಮೂಡಿಸುವ ಕೆಲಸ ಆಗಿದೆ ಮುಂದಕ್ಕೂ ರಾಜ್ಯಾದ್ಯಂತ ಎಲ್ಲಾ ತಾಲ್ಲೂಕು ಕೇಂದ್ರಗಳಿಗೆ ಕಾಲ್ನಡಿಗೆಯಲ್ಲಿ ತೆರಳಿ ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ಜಾಗೃತಿ ಕಾರ್ಯಕ್ರಮ ನೀಡಲಿದ್ದೇನೆ ಎಂದರು

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಧ್ಯಕ್ಷೆ ನಂದ ಪಾಯಸ್ ಮಾಹಿತಿ ನೀಡಿ ಮುಂದಿನ ಡಿಸೆಂಬರ್ ತಿಂಗಳಲ್ಲಿ ತಮಿಳುನಾಡು ಗಡಿ ಪ್ರದೇಶ ಚಾಮರಾಜಪೇಟೆ ಯನ್ನು ತಲುಪಿ ಒಟ್ಟು 12000 ಕಿ.ಮಿ. ಪಾದಯಾತ್ರೆ ಮಾಡುವ ಮೂಲಕ ವಿವೇಕಾನಂದರು ಗುರಿ ಮುಗಿಸಲಿದ್ದಾರೆ ಎಂದರು

ಮುಲ್ಕಿ ನಪಂ ಸ್ಥಾಯಿ ಸಮಿತಿ ಅಧ್ಯಕ್ಷ ಶೈಲೇಶ್ ಕುಮಾರ್, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ದಕ್ಷಿಣ ಕನ್ನಡ ಜಿಲ್ಲೆಯ ಕೋಶಾಧಿಕಾರಿ ಅಶೋಕ್ ಭಟ್, ಸಾಮಾಜಿಕ ಕಾರ್ಯಕರ್ತ, ಪತ್ರಕರ್ತ ಅದ್ದಿ ಬೊಳ್ಳೂರು, ಕರ್ನಾಟಕ ಮಾದಿಗ ದಂಡೋರ ಹೋರಾಟ ಸಮಿತಿ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಮಂಜುನಾಥ್ ಆರ್.ಕೆ, ಗೃಹರಕ್ಷಕ ದಳ ಮುಲ್ಕಿ ಘಟಕದ ಮಾಜಿ ಅಧಿಕಾರಿ ಮನ್ಸೂರ್ ಮತ್ತಿತರರು ವಿವೇಕಾನಂದ ರವರೊಂದಿಗೆ ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಸದಾಶಿವನಗರ ಲಿಂಗಪ್ಪಯ್ಯ ಕಾಡು ಚೆನ್ನಮಲ್ಲಿಕಾರ್ಜುನ_ ಮಠಕ್ಕೆ ಭೇಟಿ ನೀಡಿದರು.

ಮಠದ ಆವರಣದಲ್ಲಿ ಸ್ವಾಗತಿಸಿದ ಸಾಮಾಜಿಕ ಕಾರ್ಯಕರ್ತ ಭೀಮಾಶಂಕರ ಮತ್ತು ಮಲ್ಲಿಕಾರ್ಜುನ ಮತ್ತಿತರರು ವಿವೇಕಾನಂದ ರವರಿಗೆ ಅಭಿನಂದನೆಗಳನ್ನು ಸಲ್ಲಿಸಿ ಉತ್ತರ ಕರ್ನಾಟಕದ ಶೈಲಿಯ ಜೋಳದ ರೊಟ್ಟಿ ಹಾಗೂ ಸ್ವಾದಿಷ್ಟ ಉಪಹಾರದ ವ್ಯವಸ್ಥೆಯನ್ನು ನೆರವೇರಿಸಿ ಅಲ್ಲಿಂದ ಸುರತ್ಕಲ್ ಕಡೆಗೆ ತೆರಳಿದರು.

Edited By : Manjunath H D
Kshetra Samachara

Kshetra Samachara

02/08/2021 09:47 am

Cinque Terre

11.41 K

Cinque Terre

1

ಸಂಬಂಧಿತ ಸುದ್ದಿ