ಮುಲ್ಕಿ: ಮುಲ್ಕಿ ಸಮೀಪದ ಪಡುಪಣಂಬೂರು ಅರಸು ಡೈರಿ ಫಾರ್ಮ್ಸ್ ನಲ್ಲಿ ದೀಪಾವಳಿ ಪ್ರಯುಕ್ತ ಸಾಮೂಹಿಕ ಗೋಪೂಜೆ ನಡೆಯಿತು.
ಗೋಪೂಜೆಗೆ ಚಾಲನೆ ನೀಡಿ ಮುಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು ಮಾತನಾಡಿ, ದೀಪಾವಳಿ ಸರ್ವಧರ್ಮದ ಪ್ರತೀಕವಾಗಿದ್ದು ಕೊರೊನಾ ಮಹಾಮಾರಿ ದೂರವಾಗಿ ಎಲ್ಲೆಡೆ ವಿಶ್ವಶಾಂತಿ ನೆಲೆಸಲಿ ಎಂದರು.
ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ದೀಪಾವಳಿ ಪ್ರಯುಕ್ತ ಸಾಮೂಹಿಕ ಗೋಪೂಜೆ ನಡೆಸುತ್ತಿರುವ ಅರಸು ಡೈರಿ ಫಾರ್ಮ್ಸ್ ಕಾರ್ಯವೈಖರಿ ಶ್ಲಾಘನೀಯ ಎಂದರು.
ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಕೆಪಿಸಿಸಿ ಕೋಆರ್ಡಿನೇಟರ್ ವಸಂತ ಬೆರ್ನಾಡ್, ದರ್ಶನ್ ಜೈನ್, ಗುರುಮೂರ್ತಿ ರಾವ್, ನಟರಾದ ವಿಸ್ಮಯ ವಿನಾಯಕ್, ಮಂಜು ರೈ ಮೂಳೂರು,ಸಪ್ತ ಪಾವೂರು, ಕಾರ್ಪೊರೇಟರ್ ಅನಿಲ್ ಕುಮಾರ್, ಗ್ರಾಹಕರಾದ ಸತೀಶ್ ಭಟ್, ಧರ್ಮಾನಂದ ತೋಕೂರು, ಕೃಷ್ಣ ಹೆಬ್ಬಾರ್, ಶಾಮ್ ಪಡುಪಣಂಬೂರು ಮತ್ತಿತರರು ಉಪಸ್ಥಿತರಿದ್ದರು. ಅರಸು ಡೈರಿ ಫಾರ್ಮ್ ನ ಗೌತಮ್ ಜೈನ್ ಸ್ವಾಗತಿಸಿ, ನಿರೂಪಿಸಿದರು.
Kshetra Samachara
16/11/2020 08:20 pm