ಪುತ್ತೂರು: ಪುತ್ತೂರಿನ ಹೆಸರಾಂತ ವೈದ್ಯರಾದ ಡಾ.ಎಂ.ಕೆ.ಪ್ರಸಾದ್ ಅವರಿಗೆ ಪ್ರತಿಷ್ಠಿತ ಐ.ಎಮ್.ಎ, ಕೆ.ಎಸ್.ಬಿ ಡಾಕ್ಟರ್ಸ್ ಡೇ ಪ್ರಶಸ್ತಿಗೆ ಪುರಸ್ಕೃತರಾಗಿರುವ ಹಿನ್ನೆಲೆಯಲ್ಲಿ ಜುಲೈ 14 ರಂದು ಪುತ್ತೂರಿನ ಕೊಟೇಚಾ ಹಾಲ್ ನಲ್ಲಿ ನಾಗರಿಕ ಅಭಿವಂದನಾ ಸನ್ಮಾನ ನಡೆಯಲಿದೆ ಎಂದು ಅಭಿವಂದನಾ ಸಮಿತಿಯ ಅಧ್ಯಕ್ಷ ಸುರೇಶ್ ಪುತ್ತೂರಾಯ ಮಾಹಿತಿ ನೀಡಿದರು.
ಸರಕಾರಿ ವೈದ್ಯರಾಗಿ, ಜನಾನುರಾಗಿಯಾಗಿರುವ ಡಾ. ಎಂ.ಕೆ. ಪ್ರಸಾದ್ ಎಲ್ಲಾ ವರ್ಗದವರಿಗೂ ಬೇಕಾದವರಾಗಿದ್ದಾರೆ. ಪುತ್ತೂರಿಗೆ ಗೌರವ ತಂದ ಡಾ.ಪ್ರಸಾದ್ ಅವರಿಗೆ ನಾಗರಿಕ ಸನ್ಮಾನ ನೆರವೇರಿಸಬೇಕು ಎನ್ನುವ ಕಾರಣಕ್ಕಾಗಿ ಈ ಅಭಿವಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಹಾಗೇ ಕಾರ್ಯಕ್ರಮದ ಮೊದಲು ವೈದ್ಯರನ್ನು ಮೆರವಣಿಗೆಯ ಮೂಲಕ ಸಭಾಂಗಣಕ್ಕೆ ಕರೆತರಲಾಗುವುದು ಎಂದು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಎಸ್.ಅಂಗಾರ, ವೇದಮೂರ್ತಿ ರವೀಶ್ ತಂತ್ರಿ ಸೇರಿದಂತೆ ಹಲವು ಗಣ್ಯರು ಭಾಗವಹಿಸುವರು ಎಂದರು.
Kshetra Samachara
11/07/2022 12:44 pm