ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ: ಆಝಾದಿ ಕಾ ಅಮೃತ ಮಹೋತ್ಸವ್ ಪ್ರಯುಕ್ತ ಬೃಹತ್ ಕಾಲ್ನಡಿಗೆ ಜಾಥಾ

ಕಾರ್ಕಳ: ಕಾರ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇವತ್ತು ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ಬೃಹತ್ ಕಾಲ್ನಡಿಗೆ ಜಾಥಾ ನಡೆಯಿತು. ಕಾಲ್ನಡಿಗೆ ಜಾಥಾವು ಕಾರ್ಕಳದ ಪುಲ್ಕೇರಿ ಸರ್ಕಲ್ ನಿಂದ ಹೊರಟು ದಾನಶಾಲಾ ಮಾರ್ಗವಾಗಿ ಅನಂತಶಯನ ವೃತ್ತ, ಸ್ಟೇಟ್ ಬ್ಯಾಂಕ್ ರಸ್ತೆ, ಬಂಡಿಮಠ ಮೂಲಕ ಜೋಡುರಸ್ತೆ ಜಂಕ್ಷನ್ ವರೆಗೆ ಸಾಗಿ ಬಂತು.

ಬಳಿಕ ಜೋಡುರಸ್ತೆಯ ಕುಲಾಲ ಸಭಾಭವನದಲ್ಲಿ ಸಭಾ ಕಾರ್ಯಕ್ರಮ ಸಂಪನ್ನಗೊಂಡಿತು. ಜಾಥಾದಲ್ಲಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡು ದೇಶಭಕ್ತಿಯ ಘೋಷಣೆಗಳನ್ನು ಕೂಗಿದರು. ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಡಿಸಿಸಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕೆಪಿಸಿಸಿ ಕಾರ್ಯದರ್ಶಿ ಎಂ.ಎ.ಗಫೂರ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

Edited By : Shivu K
Kshetra Samachara

Kshetra Samachara

09/08/2022 09:39 pm

Cinque Terre

6.85 K

Cinque Terre

0

ಸಂಬಂಧಿತ ಸುದ್ದಿ