ವರದಿ: ರಹೀಂ ಉಜಿರೆ
ಕಾರ್ಕಳ: ಕರ್ನಾಟಕದ ಕಲಾ ಪ್ರಕಾರಗಳು ಮತ್ತು ಕಲಾವಿದರು ಒಂದೇ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ದೃಶ್ಯ ಅಪರೂಪದ್ದು. ಕೊರೊನಾ ನಂತರ ಹತ್ತು ಸಾವಿರಕ್ಕೂ ಅಧಿಕ ಕಲಾವಿದರು ಒಂದೇ ಕಡೆ ಸೇರಿದ ವಿಶೇಷ ಕ್ಷಣ. ಇದಕ್ಕೆ ಸಾಕ್ಷಿಯಾದದ್ದು ಕಾರ್ಕಳ ಉತ್ಸವ...
ಕರಾವಳಿಯ ಕಲಾ ಪ್ರಕಾರಗಳಾದ ಯಕ್ಷಗಾನ ವೇಷ, ಹುಲಿಕುಣಿತದ ವೇಷ, ಉತ್ತರ ಕರ್ನಾಟಕದ ಭಾಗದ ಡೊಳ್ಳು ಕುಣಿತ, ವೀರಗಾಸೆ ಹೀಗೆ ಸುಮಾರು ಐನೂರಕ್ಕೂ ಅಧಿಕ ಕಲಾಪ್ರಕಾರಗಳು, ಹತ್ತು ಸಾವಿರಾರಕ್ಕೂ ಅಧಿಕ ಕಲಾವಿದರು ಮತ್ತು ವಿದ್ಯಾರ್ಥಿಗಳ ಅದ್ದೂರಿ ಮೆರವಣಿಗೆ, ಕರಾವಳಿಯ ಪಾಲಿಗೆ ಇದು ಕಂಡುಕೇಳರಿಯದ ಅದ್ದೂರಿ ಮೆರವಣಿಗೆ. ಇಂತಹ ಬೃಹತ್ ಮೆರವಣಿಗೆ ನಡೆದದ್ದು ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ. ರಾಜ್ಯದ ಇಂಧನ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಕಳ ಉತ್ಸವ ಕಾರ್ಯಕ್ರಮದ ಎಂಟನೇ ದಿನ ಇಂತಹದ್ದೊಂದು ಕಲಾವಿದರ ಮೆರವಣಿಗೆಗೆ ಕರಾವಳಿ ಜನ ಸಾಕ್ಷಿಯಾದರು....
ಈ ಅಪೂರ್ವ ಮೆರವಣಿಗೆ ಅಣ್ತುಂಬಿಕೊಳ್ಳಲು ಸುಮಾರು ಐವತ್ತು ಸಾವಿರಕ್ಕೂ ಅಧಿಕ ಮಂದಿ ರಸ್ತೆಯ ಇಕ್ಕೆಲಗಳಲ್ಲಿ ಸೇರಿದ್ದರು.
ಸಚಿವ ಸುನೀಲ್ ಕುಮಾರ್ ತಮ್ಮ ಕ್ಷೇತ್ರದ ಜನರಿಗಾಗಿ ಹಮ್ಮಿಕೊಂಡಿದ್ದ ಕಾರ್ಕಳ ಉತ್ಸವದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಮೇಳಗಳನ್ನು ಆಯೋಜಿಸಿ, ವಿದ್ಯುತ್ ದೀಪಾಲಂಕಾರಗಳಿಂದ ಇಡೀ ಕಾರ್ಕಳವನ್ನು ಸಿಂಗಾರಿಸಲಾಗಿತ್ತು. ಒಟ್ಟಾರೆ ಕಾರ್ಕಳ ಉತ್ಸವ ಎನ್ನುವುದು ಕರಾವಳಿ ಪಾಲಿಗೆ ಹೊಸ ಇತಿಹಾಸವಾಗಿ ದಾಖಲಾಯಿತು.
Kshetra Samachara
19/03/2022 01:22 pm