ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ವೈಭವದ ಮಂಗಳೂರು ದಸರಾ ಆಚರಿಸಲಾಗುತ್ತಿದೆ. ಕ್ಷೇತ್ರದ ಅಭಿವೃದ್ಧಿ ರೂವಾರಿ ಜನಾರ್ದನ ಪೂಜಾರಿ ದೇವಸ್ಥಾನಕ್ಕೆ ಭೇಟಿ ನೀಡಿ, ಶಾರದಾ ದೇವಿ ಸೇರಿದಂತೆ ನವದುರ್ಗೆಯರಿಗೆ ಪೂಜೆ ಸಲ್ಲಿಸಿದರು.
ಇದೇ ವೇಳೆ ನಾರಾಯಣ ಗುರುಗಳು, ಗಣಪತಿ, ನವದುರ್ಗೆಯರು, ಗೋಕರ್ಣನಾಥನ ದರ್ಶನ ಪಡೆದರು. ವಿಶೇಷ ಪೂಜೆ ಸಲ್ಲಿಸಿದ ಬಳಿಕ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕೆಲಹೊತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ ಖುಷಿಪಟ್ಟರು. ಇದೇ ವೇಳೆ ಮಾತನಾಡಿದ ಅವರು, ಕುದ್ರೋಳಿ ಕ್ಷೇತ್ರದಲ್ಲಿ ನಡೆಯುವ ದಸರಾ ಬಹಳ ದೊಡ್ಡದು. ಇದರ ರೂವಾರಿ ನಾನಲ್ಲ. ಒಳಗೆ ಕುಳಿತಿರುವ ಶಿವ ದೇವರು, ಎಲ್ಲರಿಗೂ ಶಿವನ ಆಶೀರ್ವಾದ ಸಿಗಲಿ ಎಂದು ಹಾರೈಸಿದರು.
ಈ ಬಾರಿಯ ದಸರಾ ಹಬ್ಬವನ್ನು ಬಹಳ ಕಟ್ಟುನಿಟ್ಟಿನಿಂದ ಆಚರಿಸಲಾಗುತ್ತಿದೆ. ಕೋವಿಡ್ ತಡೆಗೆ ಸರ್ಕಾರ ಸಾಕಷ್ಟು ಮುಂಜಾಗ್ರತೆ ವಹಿಸುತ್ತಿದೆ. ಅದು ಆಗಲೇಬೇಕು. ಹೀಗಾಗಿ ಪ್ರತಿಯೊಬ್ಬರೂ ಸರ್ಕಾರದ ಸೂಚನೆಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು.
Kshetra Samachara
25/10/2020 01:18 pm