ಉಡುಪಿ: ಉಡುಪಿ ಜಿಲ್ಲಾಡಳಿತ ವತಿಯಿಂದ ಭುಜಂಗ ಪಾರ್ಕ್ ನಲ್ಲಿ ಗಾಂಧಿ ಜಯಂತಿ ಆಚರಿಸಲಾಯಿತು.
ಜಿಲ್ಲಾಧಿಕಾರಿ ಜಿ.ಜಗದೀಶ್, ಶಾಸಕ ರಘುಪತಿ ಭಟ್ ಹಾಗೂ ಇತರ ಗಣ್ಯರು ಗಾಂಧೀಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಈ ಸಂದರ್ಭ ಅಜ್ಜರಕಾಡುವಿನಲ್ಲಿರುವ ರೇಡಿಯೋ ಟವರ್ ಗೆ ಮರು ಚಾಲನೆ ನೀಡಲಾಯಿತು.
ಜಿಲ್ಲಾಧಿಕಾರಿ ಜಿ.ಜಗದೀಶ್ ಮಾತನಾಡಿ, "ಗಾಂಧೀಜಿಯವರು ತಮ್ಮ ಜೀವನವನ್ನೇ ಹೋರಾಟವನ್ನಾಗಿ ಮಾಡಿ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ಇಂತಹ ಮಹನೀಯರನ್ನು ನಾವು ಸದಾಕಾಲ ನೆನಪು ಮಾಡಿಕೊಳ್ಳಬೇಕು. ಆದರೆ, ಇಂದಿನ ಯುವ ಜನತೆಗೆ ಮಹಾತ್ಮ ಗಾಂಧೀಜಿ ಪರಿಚಯ ಸ್ವಲ್ಪ ಕಡಿಮೆ ಆಗುತ್ತಿರುವಂತೆ ಕಾಣುತ್ತಿದೆ. ಶಾಲಾ ಕಾಲೇಜುಗಳಲ್ಲಿ ಇನ್ನೂ ಕೂಡ ಗಾಂಧೀಜಿ ಚಿಂತನೆ ಕಲಿಸುವ, ಮನದಟ್ಟು ಮಾಡಿಸುವ ಅಗತ್ಯ ವಿದೆ" ಎಂದರು.
Kshetra Samachara
02/10/2020 12:04 pm