ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: "ಅಗ್ನಿಪಥ್ "ಗೆ ಜಿಲ್ಲೆಯಲ್ಲಿ ಯುವಪಡೆ ಸಜ್ಜು

ವರದಿ: ರಹೀಂ ಉಜಿರೆ

ಉಡುಪಿ: ಉಡುಪಿಯಲ್ಲಿ ಯುವಕರ ತಂಡವೊಂದು ವಿಶಿಷ್ಟ ಕಾರ್ಯದಲ್ಲಿ ನಿರತವಾಗಿದೆ. ಅಗ್ನಿಪಥ್ ಯೋಜನೆಗೆ ಯುವಕರನ್ನು ಆಕರ್ಷಿಸಲು ಅಗ್ನಿಸೇತು ತರಬೇತಿ ಕಾರ್ಯಕ್ರಮ ಆರಂಭಿಸಿದೆ.

ಉಡುಪಿಯ ಟೀಮ್ ನೇಶನ್ ಫಸ್ಟ್ ತಂಡದವರು ಮಾತಿಗಿಂತ ಕೃತಿ ಮೇಲು ಎಂದು ಸೈಲೆಂಟಾಗಿ ವಿಶಿಷ್ಟ ಕಾರ್ಯಕ್ರಮ ಆರಂಭಿಸಿದ್ದಾರೆ. ಅಗ್ನಿಪಥ್ ಯೋಜನೆಗೆ ನಡೆಯುವ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಯುವಕರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ನಾಡಿನ ವಿವಿಧ ಭಾಗಗಳಿಂದ ಬಂದ 44 ಮಂದಿ ಯುವಕರ ತಂಡ ಹಗಲಿರುಳು ತರಬೇತಿ ಪಡೆಯುತ್ತಿದೆ. ಕೇವಲ ಉಡುಪಿ ಮಾತ್ರವಲ್ಲದೆ ರಾಜ್ಯದ ನಾನಾ ಜಿಲ್ಲೆಗಳಿಂದ ಯುವಕರನ್ನು ಕರೆಸಿಕೊಳ್ಳಲಾಗಿದೆ. ನಿವೃತ್ತ ಯೋಧರನ್ನು ತರಬೇತಿಗೆ ವ್ಯವಸ್ಥೆಗೊಳಿಸಲಾಗಿದೆ. ಆಟೋಟ ಸ್ಪರ್ಧೆ, ದೈಹಿಕ ಕ್ಷಮತೆ ಹಾಗೂ ಥಿಯರಿ ಪರೀಕ್ಷೆ ಎದುರಿಸಲು ಬೇಕಾದ ಎಲ್ಲಾ ತರಬೇತಿಯನ್ನು ಸಂಪೂರ್ಣ ಉಚಿತವಾಗಿ ಇಲ್ಲಿ ನೀಡಲಾಗುತ್ತಿದೆ.

ಕರಾವಳಿ ಭಾಗದ ಯುವಕರು ಸೈನ್ಯಕ್ಕೆ ಸೇರ್ಪಡೆಯಾಗುವುದಿಲ್ಲ ಎನ್ನುವ ಆರೋಪವಿದೆ. ಈ ಆರೋಪವನ್ನು ಹೋಗಲಾಡಿಸುವುದು ಈ ತರಬೇತಿ ಶಿಬಿರದ ಮೂಲ ಉದ್ದೇಶ. ಕರಾವಳಿ ಭಾಗದ ಯುವಕರಲ್ಲಿ ರಾಷ್ಟ್ರಪ್ರೇಮ ಜಾಗೃತಗೊಳಿಸುವ ಸಲುವಾಗಿ ನೇಷನ್ ಫಸ್ಟ್ ತಂಡ ಈ ಮಹತ್ವದ ಕಾರ್ಯ ಕೈಗೊಂಡಿದೆ. ವಿದ್ಯಾರ್ಥಿ ಜೀವನದಲ್ಲಿ ncc ತರಬೇತು ಪಡೆದ ಯುವಕರೆಲ್ಲಾ ಸೇರಿ ಈ ನೇಶನ್ ಫಸ್ಟ್ ಎನ್ನುವ ತಂಡ ಕಟ್ಟಿಕೊಂಡಿದ್ದಾರೆ. ಶಿಕ್ಷಣದ ನಂತರವೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸುವ ಉದ್ದೇಶದಿಂದ ಈ ತಂಡ ರೂಪುಗೊಂಡಿದೆ. ದೇಶಭಕ್ತ ಯುವಕರನ್ನು ಒಟ್ಟು ಗೂಡಿ ನಾನಾ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳುತ್ತಿದ್ದು, ಈ ಕಾರಣದಿಂದ ಅಗ್ನಿಸೇತು ತರಬೇತಿ ಶಿಬಿರವು ರಾಜ್ಯಕ್ಕೆ ಮಾದರಿ ಎನಿಸಿದೆ.

ಈ ಬಾರಿ ಅತ್ಯಂತ ಯಶಸ್ವಿಯಾಗಿ ಶಿಬಿರ ನಡೆದಿದ್ದು ಮುಂದಿನ ವರ್ಷಗಳಲ್ಲಿ ಇದನ್ನು ಮತ್ತಷ್ಟು ವಿಸ್ತರಿಸುವ ಚಿಂತನೆಯನ್ನು ತಂಡ ಹೊಂದಿದೆ. ಈ ಯುವಕರ ಪ್ರಯತ್ನಕ್ಕೆ ಶುಭ ಹಾರೈಸೋಣ.

Edited By : Nagesh Gaonkar
PublicNext

PublicNext

09/09/2022 09:42 pm

Cinque Terre

53.97 K

Cinque Terre

0

ಸಂಬಂಧಿತ ಸುದ್ದಿ