ಮೂಡುಬಿದಿರೆ: ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ 2017-18 ರ ಬ್ಯಾಚಿನ 100 ಜನ ಬಿಎಎಂಎಸ್ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಂಪನ್ನಮ್ ಕಾರ‍್ಯಕ್ರಮವು - ಗುರುವಾರ ಡಾ ವಿಎಸ್ ಆಚಾರ‍್ಯ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಕಾರ‍್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಡಾ ವಿನಯ್ ಆಳ್ವ, ಆಯುರ್ವೇದ ವೈದ್ಯ ಪದ್ದತಿಯನ್ನು ವೈದ್ಯಶಾಸ್ತ್ರದ ತಾಯಿಯೆಂದು ಭಾವಿಸಲಾಗಿದೆ. ಆ ಹಿನ್ನಲೆಯಲ್ಲಿ ಈ ವೈದ್ಯ ಪದ್ದತಿಯನ್ನು ಅನುಸರಿಸುವ ನೀವೆಲ್ಲರೂ ಹೆಮ್ಮೆಪಡಬೇಕು ಎಂದರು.
ಹಿಮಾಲಯ ಡ್ರಗ್ ಕಂಪೆನಿ ಪಾಯೋಜಿತ ನಗದು ಬಹುಮಾನ ಹಾಗೂ ಪುರಸ್ಕಾರವನ್ನು ಈ ಸಂಧರ್ಭದಲ್ಲಿ ನೀಡಿ ಗೌರವಿಸಲಾಯಿತು.
2015-16ನೇ ಬ್ಯಾಚ್‌ನ ಡಾ ದೀಪ್ತಿ ರಾವ್ ಹಾಗೂ ಡಾ ಪವಿತ್ತಾ ಪೈ ರವರಿಗೆ ಜೀವಕ ಹಾಗೂ ಆಯುರ್‌ವಿಷಾರಧ ಪುರಸ್ಕಾರದೊಂದಿಗೆ ಕ್ರಮವಾಗಿ ರೂ 15000 ಹಾಗೂ ರೂ 10,000 ಸಾವಿರ ನಗದು ಬಹುಮಾನ ನೀಡಲಾಯಿತು. 2016-17 ನೇ ಬ್ಯಾಚ್‌ನ ಡಾ ಸಾಯಿ ಚಿನ್ಮಯಿ ಹಾಗೂ ಡಾ.ಪೂಜಾ ಬಿ.ಜಿ.ಯವರಿಗೆ ಜೀವಕ ಹಾಗೂ ಆಯುರ್‌ವಿಷಾರಧ ಪುರಸ್ಕಾರದೊಂದಿಗೆ ನಗದು ಬಹುಮಾನ ನೀಡಲಾಯಿತು.
ಡಾ ಸೀತಾಲಕ್ಷ್ಮಿ ಪಿ ಮೆಮೋರಿಯಲ್ ಎಂಡೋಮೆಂಟ್ ಆ್ಯಂಡ್ ಕ್ಯಾಶ್ ಆವರ್ಡ್ನ್ನು 2021-22ರ ಸಾಲಿನ ಪ್ರಸೂತಿ ತಂತ್ರ ಹಾಗೂ ಸ್ತ್ರೀ ರೋಗ ವಿಷಯದಲ್ಲಿ ಕಾಲೇಜಿಗೆ ಪ್ರಥಮ ಬಂದ ಅಪರ್ಣಾ ಸುನೀಲ್ ಕುಮಾರ ಹಾಗೂ ವಿಶ್ಮಿತಾ ಪಿ ಶೆಟ್ಟಿ ಯವರಿಗೆ ನಗದು ಬಹುಮಾನ ರೂ 5000 ನೀಡಿ ಗೌರವಿಸಲಾಯಿತು.
ಕಾರ‍್ಯಕ್ರಮದಲ್ಲಿ ಆಳ್ವಾಸ್ ಆಯುರ್ವೇದ ಕಾಲೇಜಿನ ಪ್ರಾಚರ‍್ಯ ಡಾ ಸಜಿತ್ ಎಂ, ಯುಜಿ ವಿಭಾಗದ ಡೀನ್ ಡಾ ಪ್ರಶಾಂತ ಜೈನ್, ಪಿಜಿ ವಿಭಾಗದ ಡೀನ್ ಡಾ ರವಿಪ್ರಸಾದ ಹೆಗ್ಡೆ, ಸಹಾಯಕ ಪ್ರಾಧ್ಯಪಕಿ ಡಾ ನಿಕೆಲ್, ಹಿಮಾಲಯ ಡ್ರಗ್ ಕಂಪೆನಿಯ ಫಾರ್ಮಾಸಿಟಿಕಲ್ ವಿಭಾಗದ ವೈಜ್ಞಾನಿಕ ಸೇವೆಗಳ ಮ್ಯಾನೇಜರ್ ಡಾ ಮೊಹಮ್ಮದ್ ಉಸೇನ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ ಸುಶೀಲ್ ಶೆಟ್ಟಿ, ಸಹ ಪ್ರಾಧ್ಯಪಕಿ ಡಾ ರೋಹಿಣಿ ಪುರೋಹಿತ್ ಕರ‍್ಯಕ್ರಮ ನಿರ್ವಹಿಸಿದರು.
Kshetra Samachara
28/05/2022 10:47 pm