ಕೋಟೇಶ್ವರ: ಕೋಟೇಶ್ವರದ ಪಬ್ಕಿಕ್ ಸ್ಕೂಲ್ ನಲ್ಲಿ ಉತ್ತಮ ಸಂದೇಶದೊಂದಿಗೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.ರಂಗೋಲಿಗಳಿಂದ ರಚಿಸಲಾದ ಭಾರತದ ಭೂಪಟದ ಜೊತೆಗೆ ಭಾರತ ಮಾತೆಯ ರಂಗವಲ್ಲಿ ಚಿತ್ರಕ್ಕೆ ಕೋಟೇಶ್ವರ ಪಬ್ಲಿಕ್ ಸ್ಕೂಲ್‌ನ ಎಸ್‌ಎಸ್ ಎಲ್‌ಸಿ ವಿದ್ಯಾರ್ಥಿಗಳು ಹಣತೆ ಹಚ್ಚಿ ದೀಪ ಬೆಳಗಿಸಿ ಬೀಳ್ಕೊಡುವ ಅಪೂರ್ವ ಸನ್ನಿವೇಶ ಇದು.
ಶಾಲಾ ಸಭಾಭವನದಲ್ಲಿ 8 ಅಡಿ ಎತ್ತರದ 7 ಅಡಿ ಅಗಲದ ಭಾರತ ಭೂಪಟದ ಜೊತೆ ಮಧ್ಯದಲ್ಲಿ ಭಾರತ ಮಾತೆಯ ಚಿತ್ರ ರಚಿಸಲಾಗಿತ್ತು. ಶಾಲೆಯ 126 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ವೇದಿಕೆಗೆ ಬಂದು ಭಾವೈಕ್ಯತೆಯ ಸಂದೇಶ ಸಾರಿದರು. ಬಳಿಕ ಸರ್ವಧರ್ಮಗಳ ಮಾನವೀಯತೆಯ ಪ್ರತಿಬಿಂಬವನ್ನು ಸಾರುವ ಹಣತೆಗಳ ಮೂಲಕ ಭಾರತ ಮಾತೆ ಹಾಗೂ ಭಾರತ ಭೂಪಟದ ಸುತ್ತ ಎಲ್ಲ ವಿದ್ಯಾರ್ಥಿಗಳು ಜಾತಿ, ಮತ ಭೇದವೆನ್ನದೆ ಹಣತೆಗಳನ್ನು ಹಚ್ಚಿ ಪ್ರತಿಜ್ಞೆ ಸೀಕರಿಸಿ ಭಾರತ ಮಾತೆಯ ಆಶೀರ್ವಾದ ಪಡೆದರು.
Kshetra Samachara
26/03/2022 03:14 pm