ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಕರಾವಳಿಯ ಗಂಡು ಕಲೆ ಯಕ್ಷಗಾನ‌ ಕಲಿಯಲು ಉತ್ತರ ಭಾರತದ ವಿದ್ಯಾರ್ಥಿಗಳ ದಂಡು!

ವರದಿ: ರಹೀಂ ಉಜಿರೆ

ಉಡುಪಿ ; ಕರಾವಳಿಯ ಗಂಡು ಕಲೆ ಯಕ್ಷಗಾನ. ಇತ್ತೀಚಿನ ವರ್ಷಗಳಲ್ಲಿ ದೂರದೂರುಗಳಲ್ಲೂ ಪ್ರಸಿದ್ಧಿ ಪಡೆದು, ವಿದೇಶದಲ್ಲೂ ತನ್ನ ಕಂಪನ್ನು ಪಸರಿಸುತ್ತಿದೆ. ಹೀಗಾಗಿ ಯಕ್ಷಗಾನದಂತಹ ಶ್ರೇಷ್ಠ ಕಲೆಯನ್ನು ಕಲಿಯಬೇಕು ಎಂಬ ಆಸಕ್ತಿಯಿಂದ ಉತ್ತದ ಭಾರತದ ಯುವಕ ಯುವತಿಯರು ಉಡುಪಿಗೆ ಆಗಮಿಸಿದ್ದಾರೆ.

ಹಿಂದೆ ಕರಾವಳಿಗೆ ಮಾತ್ರ ಸೀಮಿತವಾಗಿದ್ದ ಯಕ್ಷಗಾನ ಈಗ ಸಾಗರದಾಚೆಗೂ ತನ್ನ ಪ್ರಸಿದ್ಧಿಯನ್ನು ವಿಸ್ತರಿಸಿದೆ. ವಿದೇಶದಲ್ಲೂ ಚೆಂಡೆ ಸದ್ದು ಕೇಳುವಂತಾಗಿದೆ. ಹೀಗಾಗಿ ಇಂತಹ ವಿಶಿಷ್ಟ ಕಲೆಯನ್ನು ತಾವೂ ಕರಗತ ಮಾಡಿಕೊಳ್ಳಬೇಕು ಎಂದು ಉತ್ತರ ಭಾರತದ ಯುವಕ, ಯುವತಿಯರು ದಕ್ಷಿಣದ ಕರಾವಳಿಗೆ ಬಂದಿದ್ದಾರೆ. ಯಕ್ಷಗಾನ ಅಭ್ಯಾಸ ಮಾಡುತ್ತಿದ್ದಾರೆ. ಉಡುಪಿಯ ಯಕ್ಷಗಾನ ಕೇಂದ್ರಕ್ಕೆ ಹೊಸ ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಸೇರಿದಂತೆ ವಿವಿಧ ರಾಜ್ಯದ ವಿದ್ಯಾರ್ಥಿಗಳು ಬಂದು ಯಕ್ಷಗಾನ ತರಬೇತಿ ಪಡೆಯುತ್ತಿದ್ದಾರೆ..

ಬೆಳಗ್ಗೆ ಐದರಿಂದ ಸಂಜೆ ಏಳು ಗಂಟೆಯವರೆಗೂ, ತಾಳ ಕುಣಿತ, ಭಾವಾಭಿನಯ ರಾಮಾಯಣ, ಮಹಾಭಾರತ ಪಾಠಗಳು ಹಾಗೂ ರಂಗ ಕ್ರಿಯೆಗಳ ತರಬೇತಿ ನಡೆಯುತ್ತಿದೆ. ಇನ್ನು ವಿದ್ಯಾರ್ಥಿಗಳು ಕರಾವಳಿಯ ಭಾಷೆ, ಸಂಸ್ಕೃತಿ ಕಲಿಯುತ್ತಾ ಯಕ್ಷಗಾನಕ್ಕೆ ಹೊಂದಿಕೊಳ್ಳುತ್ತಿದ್ದಾರೆ.

ಸಂಜೀವ ಸುವರ್ಣ ಅವರ ಮಾರ್ಗದರ್ಶನದಲ್ಲಿ ಒಟ್ಟು 14 ಮಂದಿ, ಒಂದು ತಿಂಗಳ ವರೆಗೆ ಉಚಿತ ಯಕ್ಷಗಾನ ತರಬೇತಿ ಪಡೆಯುತ್ತಿದ್ದಾರೆ.ಇಲ್ಲಿ ಗುರುಕುಲ ಪದ್ಧತಿಯಂತೆ ಯಕ್ಷಗಾನದ ಎಬಿಸಿಡಿ ಕಲಿಸಲಾಗುತ್ತಿದೆ.

ಕಲೆ ಮತ್ತು ಕಲಾವಿದನಿಗೆ ಭಾಷೆ ಮತ್ತು ಗಡಿಯ ಹಂಗಿಲ್ಲ, ಶ್ರದ್ದೆಯಿಂದ ಕಲಿತರೆ ಯಾವುದೇ ಕಲೆಯೂ ಒಲಿಯುದರಲ್ಲಿ ಎರಡು ಮಾತಿಲ್ಲ,ಅಲ್ಲವೇ?

Edited By : Nagesh Gaonkar
Kshetra Samachara

Kshetra Samachara

27/11/2021 06:19 pm

Cinque Terre

14.44 K

Cinque Terre

0

ಸಂಬಂಧಿತ ಸುದ್ದಿ