ಮಂಗಳೂರು: ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯ ಪರ್ವ ದಿನದಂದು ಶ್ರೀ ದೇವರಿಗೆ ವಿಶೇಷ ಅಲಂಕಾರ ಹಾಗೂ ಪೂಜೆ, ಪ್ರಾರ್ಥನೆ ನಡೆಯಿತು.
ಶ್ರೀ ವೆಂಕಟರಮಣ ದೇವಸ್ಥಾನ ಹಾಗೂ ಶ್ರೀ ವೀರವೆಂಕಟೇಶ ಭಜನಾ ಮಂಡಳಿಯ ಸಹಭಾಗಿತ್ವದಲ್ಲಿ ನಡೆಯುವ ವಾರ್ಷಿಕ ಏಕಾಹ ಭಜನಾ ಕಾರ್ಯಕ್ರಮ ಬೆಳಗ್ಗೆ ಪ್ರಾರಂಭಗೊಂಡಿತು.
ಅಹೋರಾತ್ರಿ ಭಜನೆ ಸೇವೆ ನಡೆಯಲಿದ್ದು, ಊರ-ಪರ ಊರಿನ ಸುಮಾರು 30 ಭಜನಾ ಮಂಡಳಿಗಳು ಈ ಸೇವೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಮರುದಿನ ಬೆಳಗ್ಗೆ 5.30ಕ್ಕೆ ಮಹಾಮಂಗಲದ ಬಳಿಕ ಶ್ರೀ ದೇವರ ಕೆರೆ ಸ್ನಾನ, ಪೇಟೆ ಉತ್ಸವ ನಡೆಯಲಿದೆ.
Kshetra Samachara
25/12/2020 04:45 pm