ಮುಲ್ಕಿ: ಮುಲ್ಕಿಯ ಕಾರ್ನಾಡು ಗಾಂಧಿ ಮೈದಾನದಲ್ಲಿ ಹಳೆಯಂಗಡಿ ಮುಲ್ಕಿ ಕ್ರಿಕೆಟ್ ಅಭಿಮಾನಿಗಳ ವತಿಯಿಂದ ನಡೆದ ಚಾಂಪಿಯನ್ಸ್ ಟ್ರೋಫಿ 2020 ಕ್ರಿಕೆಟ್ ಪಂದ್ಯಾಟ ಅಂತಿಮ ರೋಮಾಂಚಕ ಹಣಾಹಣಿಯಲ್ಲಿ
ಸೆವೆನ್ ಸ್ಟಾರ್ ಕಾರ್ನಾಡು ತಂಡ ಹಳೆಯಂಗಡಿಯ ಸಾಗರ್ ಸಾಗ್ ತಂಡವನ್ನು ಸೋಲಿಸಿ ಪ್ರಶಸ್ತಿ ಹಾಗೂ ಚಾಂಪಿಯನ್ಸ್ ಟ್ರೋಫಿ 2020 ಪಡೆದುಕೊಂಡಿದೆ.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಕನ್ನಡ ಕ್ರೀಡಾ ವೆಬ್ಸೈಟ್ ಪ್ರವರ್ತಕರಾದ ಕೋಟ ರಾಮಕೃಷ್ಣ ಆಚಾರ್ಯ ಮಾತನಾಡಿ ಕ್ರೀಡೆಯ ಜೊತೆ ಸಾಧಕರನ್ನು ಗುರುತಿಸಿ ಗೌರವಿಸುವ ಸಂಘಟನೆಯ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೆ.ಎಸ್. ಗ್ರೂಪ್ ಉದ್ಯಮಿ ಸಲೀಂ, ಶಮೀರ್ ಎ ಎಚ್, ಜಮಾಲ್ ಕದಿಕೆ, ನಜೀರ್ ಕಲ್ಲಾಪು, ಬಶೀರ್ ಕಲ್ಲಾಪು, ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನೆಲೆಯಲ್ಲಿ ಶೈಕ್ಷಣಿಕ ಸೇವೆಗೆ ಹರ್ಷದ್ ಎಂ ಎ,ಕೋವಿಡ್ ದಿನಗಳಲ್ಲಿ ವೈದ್ಯಕೀಯ ಸೇವೆಗೆ ಡಾ. ಚಂದ್ರಶೇಖರ್ ಪಂಜಿನಡ್ಕ, ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಖಾದರ್
ಎ. ಎಚ್, ಮಾಜೀ ಅಂತರಾಷ್ಟ್ರೀಯ ಕ್ರಿಕೆಟಿಗ ನಿತಿನ್ ಮುಲ್ಕಿ, ಕ್ರೀಡಾಕ್ಷೇತ್ರದ ಹಿರಿಯ ಆಟಗಾರ ಮಹಮ್ಮದ್ ಕೊಲ್ನಾಡು, ನಾಸಿರ್ ಸಾಗ್, ಫಾರೂಕ್ ಸಾಗ, ಶೇಕ್ ಶಮೀಮ್ ಅಹಮದ್ ಸಾಗ್, ಇಬ್ರಾಹಿಂ ಕಾರ್ನಾಡ್, ಮೇಘರಾಜ್ ಕಾರ್ನಾಡ್, ಹುಸೇನ್ ಕಾರ್ನಾಡ್ , ಜಗನ್ನಾಥ ಸಾಲಿಯಾನ್,
ವಿಕ್ಷಕವಿವರಣೆಗಾರ ಸುರೇಶ್ ಮುಲ್ಕಿ ರವರನ್ನು ಗೌರವಿಸಲಾಯಿತು. ಟೂರ್ನಮೆಂಟಿನಲ್ಲಿ ಉತ್ತಮ ದಾಂಡಿಗ, ಎಸೆತಗಾರ, ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಸೆವೆನ್ ಸ್ಟಾರ್ ತಂಡದ ಸಲ್ಮಾನ್, ಮುರ್ಷಿ ದ್ ಕಾರ್ನಾಡ್, ಸರ್ಫರಾಜ್ ಕಾರ್ನಾಡ್ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಸಾಗರ್ ಸಾಗ್ ತಂಡದ ರಿಶಾ ದ್ ಸಾಗ್ ಪಡೆದರು.
Kshetra Samachara
21/12/2020 10:11 am