ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುನರೂರುಬೈಲು: ಯುವಕರಿಂದ ಶ್ರಮದಾನ; ಮೂಲ ಸೌಕರ್ಯ ಕೊರತೆಗೆ ಆಕ್ರೋಶ, ಚುನಾವಣೆ ಬಹಿಷ್ಕಾರಕ್ಕೆ ಚಿಂತನೆ

ಮುಲ್ಕಿ: ಕಿನ್ನಿಗೋಳಿ ಗ್ರಾಪಂ ವ್ಯಾಪ್ತಿಯ ಪುನರೂರು ಬೈಲು ಪ್ರದೇಶದಲ್ಲಿ ಪುನರೂರು ಯುವಕರ ತಂಡ ಕೃಷಿಗೆ ಪೂರಕವಾಗಿ ಶ್ರಮದಾನ ಮೂಲಕ ಅಣೆಕಟ್ಟು ನಿರ್ಮಿಸಿದ್ದಾರೆ.

ಕೃಷಿ ಪ್ರಧಾನ ಕಿನ್ನಿಗೋಳಿ ಗ್ರಾಪಂ ವ್ಯಾಪ್ತಿಯ ಪುನರೂರು ಬೈಲು ಪ್ರದೇಶದಲ್ಲಿ ಸಮರ್ಪಕ ಮೂಲ ಸೌಕರ್ಯಗಳ ಕೊರತೆ ಕಾಡುತ್ತಿದೆ.

ಈ ಪ್ರದೇಶದಲ್ಲಿ ದಾರಿದೀಪ, ರಸ್ತೆಗಳ ಅವ್ಯವಸ್ಥೆ ಎದ್ದು ಕಾಣುತ್ತಿದೆ.

ಪರಿಸರದಲ್ಲಿ ಸುಮಾರು 20 ಎಕರೆಯಷ್ಟು ಕೃಷಿ ಭೂಮಿಯಲ್ಲಿ ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ. ಸುಮಾರು 12 ವರ್ಷದಿಂದ ಕಿನ್ನಿಗೋಳಿ ಗ್ರಾಪಂ ವ್ಯಾಪ್ತಿಯ ಪುನರೂರುಬೈಲು ಪ್ರದೇಶದ ಈ ಭಾಗದಲ್ಲಿ

ಯುವಕರಾದ ಸಂತೋಷ್ ಶೆಟ್ಟಿ, ಅರುಣ್ ಡಿ ಸೋಜ,ದಿನೇಶ್ ರಾವ್ ಪುನರೂರು,ಹರೀಶ್ ಶೆಟ್ಟಿ ಶರಣೇಶ್ ,ರೋಯನ್, ನವಿನೇಶ್,ರಾಮಣ್ಣ ಮತ್ತಿತರರು ಸೇರಿಕೊಂಡು ಕೃಷಿಗೆ ಪೂರಕವಾಗಿ ಶ್ರಮದಾನ ಮೂಲಕ ಅಣೆಕಟ್ಟು ನಿರ್ಮಿಸುತ್ತಲೇ ಬಂದಿದ್ದಾರೆ.

ನೂತನ ಅಣೆಕಟ್ಟು ನಿರ್ಮಾಣ ಹಾಗೂ ಮೂಲಭೂತ ಸೌಕರ್ಯಗಳ ಬಗ್ಗೆ ಅನೇಕ ಬಾರಿ ಶಾಸಕರಿಗೆ, ಜಿಪಂ, ತಾಪಂ ಸದಸ್ಯರಿಗೆ ಮನವಿ ಮಾಡಿದರೂ ಇದುವರೆಗೂ ಸ್ಪಂದಿಸಿಲ್ಲ ಎಂದು ಸ್ಥಳೀಯ ಕೃಷಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಭಾಗದಲ್ಲಿ ಕೃಷಿಗೆ ಪ್ರೋತ್ಸಾಹ ನೀಡುವಲ್ಲಿ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಈ ಬಾರಿ ಸೂಕ್ತ ಮೂಲಭೂತ ಸೌಕರ್ಯಗಳನ್ನು ಒದಗಿಸದಿದ್ದರೆ ಮುಂಬರುವ ಎಲ್ಲ ಚುನಾವಣೆಗಳನ್ನು ಬಹಿಷ್ಕರಿಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

Edited By : Manjunath H D
Kshetra Samachara

Kshetra Samachara

19/12/2020 04:42 pm

Cinque Terre

17.03 K

Cinque Terre

1