ಮಂಗಳೂರು: ಸುಮಾರು 200 ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮೇಳದ ಈ ವರ್ಷದ ತಿರುಗಾಟ ಆರಂಭವಾಗಿದೆ.
ಕ್ಷೇತ್ರದಲ್ಲಿ ಶ್ರೀ ಮಹಾಗಣಪತಿ ದೇವರಿಗೆ ಪೂಜೆ ನೆರವೇರಿಸಿದ ಬಳಿಕ ಬಯಲಾಟ ಆರಂಭಿಸಲಾಯಿತು. ಸಾಮಾನ್ಯವಾಗಿ ಕಾರ್ತಿಕ ಮಾಸದಲ್ಲಿ ಮೇಳದ ತಿರುಗಾಟ ಆರಂಭವಾಗಿ ಹತ್ತನಾವಧಿ ಜಾತ್ರೆ ಸಂದರ್ಭ ಮುಕ್ತಾಯವಾಗುತ್ತದೆ.
ಆದರೆ, ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಕಲಾವಿದರು ಹಾಗೂ ಮೇಳದ ಯಜಮಾನರಿಗೆ ಸಂಕಷ್ಟದ ಪರಿಸ್ಥಿತಿ ಎದುರಾಗಿತ್ತು. ಇದಕ್ಕಾಗಿ ಧರ್ಮಸ್ಥಳ ಮೇಳದಲ್ಲಿ ಹೊಸ ಪ್ರಯತ್ನ ತರುವ ಸಲುವಾಗಿ ಒಂದು ತಿಂಗಳು ಸೇವಾಕರ್ತರ ನೆರವಿನಿಂದ ಕ್ಷೇತ್ರದಲ್ಲಿ ಪ್ರದರ್ಶನ ನಡೆಯಿತು.
2021 ರ ಮೇ 23ರ ವರೆಗೆ ಧರ್ಮಸ್ಥಳದ ಭಕ್ತರು ಹಾಗೂ ಅಭಿಮಾನಿಗಳು ತಮ್ಮ ಊರಿನಲ್ಲಿ ಸೇವೆಯ ಬಯಲಾಟ ಆಯೋಜಿಸಲಿದ್ದಾರೆ.
ಕಳೆದ 5 ವರ್ಷಗಳಿಂದ ಕಾಲಮಿತಿ ಯಕ್ಷಗಾನ ನೀಡುತ್ತಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕಲಾವಿದರಿಗೂ ವಿಶ್ರಾಂತಿ, ಹೆಚ್ಚಿನ ಅಧ್ಯಯನ, ಅಭ್ಯಾಸಕ್ಕೆ ಅವಕಾಶವಾಗಿದೆ. 2021 ರ ಮೇ 24 ರಿಂದ 27ರ ವರೆಗೆ ಧರ್ಮಸ್ಥಳದಲ್ಲಿ ಮೂರು ದಿನ ಸೇವೆಯಾಟ ನೀಡಿ ವರ್ಷದ ತಿರುಗಾಟಕ್ಕೆ ಕಲಾವಿದರು ಮಂಗಳ ಹಾಡಲಿದ್ದಾರೆ.
Kshetra Samachara
19/12/2020 02:51 pm