ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಳೆಯಂಗಡಿ: ತೋಕೂರಿನಲ್ಲಿ ಸಂಭ್ರಮದ ಷಷ್ಠಿ ಮಹೋತ್ಸವಕ್ಕೆ ಚಾಲನೆ

ಮುಲ್ಕಿ: ಹಳೆಯಂಗಡಿ ಸಮೀಪದ ಇತಿಹಾಸ ಪ್ರಸಿದ್ಧ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಂಭ್ರಮದ ವರ್ಷಾವಧಿ ಷಷ್ಠಿ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.

ಬೆಳಗ್ಗೆ ದೇವಸ್ಥಾನದ ಹೊರ ವಲಯದಲ್ಲಿ ನೂತನ ಸಭಾಭವನ ಸಮರ್ಪಣೆ ನಡೆಯಿತು. ಮಧ್ಯಾಹ್ನ ಧ್ವಜಾರೋಹಣ ನಡೆದು, ದೇವರ ಉತ್ಸವ ಬಲಿ ನಡೆಯಿತು.

ದೇವಳದ ಗೋಪಾಲಕೃಷ್ಣ ತಂತ್ರಿಗಳು ವಿಶೇಷ ಪ್ರಾರ್ಥನೆ ಸಲ್ಲಿಸಿ, ಕೊರೊನಾ ಮಹಾಮಾರಿಯು ವಿಶ್ವ ದಿಂದಲೇ ದೂರವಾಗಲಿ ಬೇಡಿಕೊಂಡರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ, ಈ ಬಾರಿಯ ಷಷ್ಠಿ ಉತ್ಸವ ಸರಳವಾಗಿ ನಡೆಯಲಿದ್ದು, ಭಕ್ತರು ಸರಕಾರದ ಕೊರೊನಾ ನಿಯಮ ಪಾಲಿಸಿ, ಉತ್ಸವ ಎಚ್ಚರಿಕೆಯಿಂದ ಆಚರಿಸೋಣ ಎಂದರು. ಮುಂಬೈ ಬಂಟರ ಸಂಘದ ಮಾಜಿ ಅಧ್ಯಕ್ಷ ಭುಜಂಗ ಶೆಟ್ಟಿ, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರಿದಾಸ ಭಟ್, ಮಧುಸೂದನ್ ಆಚಾರ್, ಆಡಳಿತಾಧಿಕಾರಿ ಪ್ರವೀಣ್, ವಿನೋದ್ ಸಾಲ್ಯಾನ್ ಬೆಳ್ಳಾಯರು, ಮೋಹನ್ ರಾವ್ ಹಳೆಯಂಗಡಿ, ಧರ್ಮಾನಂದ ಶೆಟ್ಟಿಗಾರ್ ತೋಕೂರು ಮತ್ತಿತರರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

18/12/2020 03:58 pm

Cinque Terre

21.64 K

Cinque Terre

0

ಸಂಬಂಧಿತ ಸುದ್ದಿ