ಮುಲ್ಕಿ: ಮುಲ್ಕಿ ವಿಜಯ ಕಾಲೇಜಿನ ವಾರ್ಷಿಕ ಸಂಚಿಕೆಯನ್ನು ಪ್ರಾಂಶುಪಾಲರಾದ ಡಾ.ಕೆ.ನಾರಾಯಣ ಪೂಜಾರಿ ಬಿಡುಗಡೆಗೊಳಿಸಿದರು.
ಬಳಿಕ ಅವರು ಮಾತನಾಡಿ, ಕಾಲೇಜಿನ ವಾರ್ಷಿಕ ಸಂಚಿಕೆಯು ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಉತ್ತಮ ವಾರ್ಷಿಕ ಸಂಚಿಕೆ ಸ್ಪರ್ಧೆಯಲ್ಲಿ ಭಾಗವಹಿಸುವುದಾಗಿ ತಿಳಿಸಿದರು.
ಈ ಸಂದರ್ಭ ವಾರ್ಷಿಕ ಸಂಚಿಕೆಯ ಮುಖ್ಯ ಸಂಪಾದಕರಾದ ಡಾ. ವಿಜಯಕುಮಾರಿ ಮಾತನಾಡಿ, ವಾರ್ಷಿಕ ಸಂಚಿಕೆ ಬಿಡುಗಡೆಗೊಳ್ಳಲು ಇದರ ಹಿಂದೆ ಕೆಲಸ ಮಾಡಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಕಾಲೇಜಿನ ಪದವಿ ಪೂರ್ವ ವಿಭಾಗದ ಪ್ರಾಂಶುಪಾಲರಾದ ಪಮೀದಾ ಬೇಗಮ್ ಉಪಸ್ಥಿತರಿದ್ದರು.
Kshetra Samachara
16/12/2020 10:38 pm