ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ನಾಡ್: ಹರಿಹರ ಶ್ರೀವಿಷ್ಣುಮೂರ್ತಿದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ

ಮುಲ್ಕಿ: ಮುಲ್ಕಿ ಸಮೀಪದ ಹರಿಹರ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ ಆಡಳಿತ ಮೊಕ್ತೇಸರ ಎಂಎಚ್ ಅರವಿಂದ ಪೂಂಜ ನೇತೃತ್ವದಲ್ಲಿ ನಡೆಯಿತು.

ಈ ಸಂದರ್ಭ ಅವರು ಮಾತನಾಡಿ ಮುಂದಿನ ವರ್ಷದಲ್ಲಿ ದೇವಳದ ಬ್ರಹ್ಮಕಲಶೋತ್ಸವಕ್ಕೆ ಚಿಂತನೆ ನಡೆಸಲಾಗಿದ್ದು ಅಭಿವೃದ್ಧಿಗೆ ಎಲ್ಲರ ಸಹಕಾರ ನೀಡಬೇಕಾಗಿ ವಿನಂತಿಸಿದರು.

ದೇವಳದಲ್ಲಿ ಮುಂದೆ ನಡೆಯುವ ದೀಪೋತ್ಸವ, ಜಾತ್ರಾ ಮಹೋತ್ಸವ, ಶಿವರಾತ್ರಿ ಮಹೋತ್ಸವ ಹಾಗೂ ಯುವಕ ವೃಂದದ ವತಿಯಿಂದ ನಡೆಯುವ ಸತ್ಯನಾರಾಯಣ ಪೂಜೆ ಬಗ್ಗೆ ಸಮಾಲೋಚನೆ ನಡೆದು ಕೊರೋನ ಮುಂಜಾಗರೂಕತೆ ವಹಿಸಿ ಸರಕಾರದ ನಿಯಮಾವಳಿಗಳನ್ನು ಪಾಲಿಸಿಕೊಂಡು ಕಾರ್ಯಕ್ರಮಗಳನ್ನು ನಡೆಸುವಂತೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಬಳಿಕ ದೇವಳದಲ್ಲಿ ಕೊರೊನಾದಿಂದ ವಿಶ್ವವೇ ತಲ್ಲಣಗೊಂಡಿದ್ದು ಕೊರೋನಾ ನಿರ್ಮೂಲನೆಗೆ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭ ದೇವಳದ ಅರ್ಚಕ ಹಯಗ್ರೀವ ಪಡ್ಡಿಲ್ಲಾಯ, ಶಶೀಂದ್ರ ಸಾಲ್ಯಾನ್, ಆನಂದ್ ಶೆಟ್ಟಿಗಾರ್,ಸುಂದರ ಕುಬೆವೂರು, ಜೀವನ್ ಶೆಟ್ಟಿ,ರವಿ ಭಟ್, ಶಿವರಾಯ ಶೆಣೈ, ರವಿರಾಜ್ ಶೆಟ್ಟಿ, ಕೃಷ್ಣಶೆಟ್ಟಿ ಕುಬೆವೂರು ಮತ್ತಿತರರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

16/12/2020 08:52 am

Cinque Terre

11.58 K

Cinque Terre

0

ಸಂಬಂಧಿತ ಸುದ್ದಿ