ಶಿರ್ವ: ಬಹಳಷ್ಟು ತಿಂಗಳುಗಳ ಕಾಲ ಕರಾವಳಿಯ ಜನಪ್ರಿಯ ಜನಪದ ಕ್ರೀಡೆ ಕಂಬಳಕ್ಕೆ ಮರುಜೀವ ಸಿಕ್ಕಿದೆ.ಕೊರೋನಾದ ಆಂತಕ ದೂರವಾಗುತ್ತಲೇ ಜನಪದ ಕ್ರೀಡೆ ಕಂಬಳಕ್ಕೆ ಚಾಲನೆ ಸಿಕ್ಕಿದೆ.
ತುಳುನಾಡಿನ ಐತಿಹಾಸಿಕ ನಡಿಬೆಟ್ಟು ಸೂರ್ಯಚಂದ್ರ ಕಂಬಳ ಶಿರ್ವ ನಡಿಬೆಟ್ಟು ಕಂಬಳ ಗದ್ದೆಯಲ್ಲಿ ನಡೆಯಿತು.
ಅನಾದಿ ಕಾಲದಿಂದ ಕೂಡ ಸಂಪ್ರದಾಯಬದ್ಧವಾಗಿ ಜೋಡುಕರೆ ಕಂಬಳ ನಡೆದುಕೊಂಡು ಬಂದಿತ್ತು. ಮಹಾಮಾರಿ ಕೊರೊನಾದಿಂದ ಕಂಬಳಕ್ಕೂ ಬ್ರೇಕ್ ಬಿದ್ದಿತ್ತು.
ಸದ್ಯ ಸರಕಾರದ ಕೋವಿಡ್ ನಿಯಮಾವಳಿಗಳನ್ನು ಪಾಲಿಸಿಕೊಂಡು ಕಂಬಳವನ್ನು ನಡೆಸಲಾಯಿತು.
ಹತ್ತಾರು ಕೋಣಗಳು ಉತ್ಸಾಹದಿಂದಲೇ ಕಂಬಳ ಗದ್ದೆ ಓಟ ನಡೆಸಿದವು.ಕರಾವಳಿಯ ನೂರಾರು ಕಂಬಳ ಪ್ರೇಮಿಗಳು ಕಂಬಳದ ಮಿಂಚಿನ ಓಟವನ್ನು ಕಣ್ಮನ ತುಂಬಿಕೊಂಡು ಸಂಭ್ರಮಿಸಿದರು.
Kshetra Samachara
15/12/2020 11:47 am