ಮುಲ್ಕಿ: ಕೊರೊನಾದಿಂದಾಗಿ ತೀವ್ರ ಸಂಕಷ್ಟಕ್ಕೆ ಒಳಗಾದ ಬಪ್ಪನಾಡು ಯಕ್ಷಗಾನ ಮೇಳದ ಕಲಾವಿದರಿಗೆ, ಸಿಬ್ಬಂದಿಗೆ ಸಂಗ್ರಹಿಸಲಾದ ದೇಣಿಗೆ ವಿತರಣೆ ಬಪ್ಪನಾಡು ದೇವಳದ ಎದುರು ಭಾಗದಲ್ಲಿ ನಡೆಯಿತು.
ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊರೊನಾ ದಾಳಿಯಿಂದಾಗಿ ಕೆಲವು ತಿಂಗಳಿನಿಂದ ಕಲಾವಿದರು ಕಷ್ಟದಲ್ಲಿದ್ದು, ಸಹಾಯ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು. ಮುಖ್ಯ ಅತಿಥಿಯಾಗಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ರಾಜಾರಾಮ್ ಭಟ್ ಮಾತನಾಡಿ, 52 ಕಲಾವಿದರಿಗೆ 6.80 ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಧರ್ಮದರ್ಶಿ ಹರಿಕೃಷ್ಣ ಪುನರೂರು, ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಬಪ್ಪನಾಡು ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಶೇಖರ ಶೆಟ್ಟಿ ಕಿಲ್ಪಾಡಿ ಬಂಡಸಾಲೆ, ಉದ್ಯಮಿ ದಿನಕರ ಭಟ್ ಮಾವೆ ದುಬೈ, ಕಲಾವಿದ ಎಲ್ಲೂರು ರಾಮಚಂದ್ರ ಭಟ್, ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾದ ನಾಗೇಶ್ ಕುಲಾಲ್ ಕುಳಾಯಿ, ನರೇಂದ್ರ ಕೆರೆಕಾಡು, ಅರ್ಚಕ ಗುರುರಾಜ ಭಟ್, ರವಿಕುಮಾರ್ ಸುರತ್ಕಲ್, ಮಾಧವ ಭಂಡಾರಿ ಕುಳಾಯಿ, ರವೀಂದ್ರ ಕೋಟ್ಯಾನ್ ಕಿನ್ನಿಗೋಳಿ, ಯಕ್ಷಗಾನ ಕಲಾವಿದ ಅರುವ ಕೊರಗಪ್ಪ ಶೆಟ್ಟಿ, ರಾಧಾಕೃಷ್ಣ ನಾವಡ, ಮೇಳದ ವ್ಯವಸ್ಥಾಪಕ ವಿನೋದ್ ಕುಮಾರ್ ಬಜ್ಪೆ, ಪ್ರಬಂಧಕ ಭವಾನಿ ಶಂಕರ ರೈ, ಸಂತೋಷ್ ಬೋಳಿಯಾರ್ ಉಪಸ್ಥಿತರಿದ್ದರು.
ಕಲಾವಿದ ದಿನೇಶ್ ರೈ ಕಡಬ ಸ್ವಾಗತಿಸಿದರು. ರಾಜೇಂದ್ರ ಪ್ರಸಾದ್ ಎಕ್ಕಾರು ನಿರೂಪಿಸಿದರು. ಮೇಳದ ಕಲಾವಿದರಿಗೆ ಪರಿಹಾರ ದೇಣಿಗೆ ವಿತರಿಸಲಾಯಿತು. ಬಳಿಕ ಚೌಕಿ ಪೂಜೆ ನಡೆದು "ಬಂಗಾರ್ ಬಾಲೆ" ಯಕ್ಷಗಾನ ನಡೆಯಿತು.
Kshetra Samachara
14/12/2020 08:39 am