ಮುಲ್ಕಿ: ಕಟೀಲು ದಿ. ಗೋಪಾಲಕೃಷ್ಣ ಆಸ್ರಣ್ಣ ಅವರ ಸಂಸ್ಮರಣೆ ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸಭಾಭವನದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಮಂಗಳೂರು ಲೋಟಸ್ ಪ್ರಾಪರ್ಟೀಸ್ ಪಾಲುದಾರರಾದ ಜಿತೇಂದ್ರ ಕೊಟ್ಟಾರಿ ವಹಿಸಿ ಮಾತನಾಡಿ ಹಿರಿಯರಾದ ದಿ. ಗೋಪಾಲಕೃಷ್ಣ ಆಸ್ರಣ್ಣರ ಆದರ್ಶ ಪಾಲಿಸಿಕೊಂಡು ಇಂದಿನ ಯುವ ಜನಾಂಗ ಮುನ್ನಡೆಯಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಮುಂಬೈ ಉದ್ಯಮಿ ವಿರಾರ್ ಶಂಕರ ಶೆಟ್ಟಿ, ಮುಂಬೈ, ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಎಂ., ಸರ್ವೋತ್ತಮ ಅಂಚನ್ ಮುಲ್ಕಿ, ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಧಾರ್ಮಿಕ ಪರಿಷತ್ ಸದಸ್ಯರಾದ ಭುವನಾಭಿರಾಮ ಉಡುಪ, ಉದ್ಯಮಿ ಶ್ರೀಪತಿ ಭಟ್ ಮೂಡಬಿದ್ರೆ,ಕದ್ರಿ ನವನೀತ ಶೆಟ್ಟಿ, ಡಾ. ಸುರೇಶ್ ರಾವ್,ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಲಾವಿದ ನಾಗೇಶ್ ಬಪ್ಪನಾಡು, ಗುರುಪ್ರಸಾದ್ ಭಟ್ ಕಟೀಲು ಉಪಸ್ಥಿತರಿದ್ದರು.
ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಸಂಸ್ಮರಣೆ ಭಾಷಣ ಮಾಡಿದರು. ವೈದಿಕ ಪ್ರಶಸ್ತಿಯನ್ನು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಕೃಷ್ಣದಾಸ್ ಭಟ್, ನಂದಿಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಮಧ್ವರಾಯ ಭಟ್ ಅವರಿಗೆ ಮೊಕ್ತೇಸರ ಪ್ರಶಸ್ತಿ, ಉತ್ತಮ ಕಲಾವಿದ ಪ್ರಶಸ್ತಿಯನ್ನು ಮಾಡಾವು ಕೊರಗಪ್ಪ ರೈ ಅವರಿಗೆ ನೀಡಲಾಯಿತು.
ದಿ. ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣೆ ಪ್ರಶಸ್ತಿಯನ್ನು ಯಕ್ಷಗಾನ ಕಲೆಯಲ್ಲಿ ವಿಶೇಷ ಸಾಧನೆ ಮಾಡಿದ ಸುಣ್ಣಂಬಳ ವಿಶ್ವೇಶ್ವರ ಭಟ್ ಅವರಿಗೆ ನೀಡಲಾಯಿತು.
ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ನಾಗಸ್ವರ ವಾದಕ ಲಿಂಗಪ್ಪ ಶೇರಿಗಾರ ಕಟೀಲು, ಎಂ.ಕೆ.ರಮೇಶ್ ಆಚಾರ್ಯ ಹಾಗೂ ಪಾಕತಜ್ಞ ವೆಂಕಟೇಶ ಭಟ್ ಪಾವಂಜೆ ಅವರನ್ನು ಗೌರವಿಸಲಾಯಿತು.
ಯಕ್ಷಲಹರಿ ಕಿನ್ನಿಗೋಳಿ ಸಂಯೋಜನೆಯಲ್ಲಿ ಯಕ್ಷಗಾನ ತಾಳಮದ್ದಳೆ ಜಾಂಬವತಿ ಕಲ್ಯಾಣ, ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ಬಯಲಾಟ "ರುಕ್ಮಿಣಿ ಕಲ್ಯಾಣ" ನಡೆಯಿತು.
ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸ್ಮಾರಕ ಟ್ರಸ್ಟ್ ನ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಸ್ವಾಗತಿಸಿದರು. ರಮ್ಯ ರವಿತೇಜ ನಿರೂಪಿಸಿದರು.
Kshetra Samachara
12/12/2020 09:38 pm