ಉಡುಪಿ: ಉಡುಪಿ ಜಿಲ್ಲೆಯಲ್ಲಿ ಸರಿಸುಮಾರು 15ರಿಂದ 20 ನಾಟಕ ತಂಡಗಳು ವೃತ್ತಿಪರವಾಗಿ ನಾಟಕ ಪ್ರದರ್ಶನ ಮಾಡುತ್ತಿದ್ದು, ಎಲ್ಲ ತಂಡದ ಸದಸ್ಯರು ಮತ್ತು ನಾಟಕ ಕಲಾವಿದರು, ತಂತ್ರಜ್ಞರು ಆರ್ಥಿಕವಾಗಿ ನಾಟಕವನ್ನೇ ಅವಲಂಬಿಸಿರುತ್ತಾರೆ.
ಕೊರೊನಾದಿಂದಾಗಿ ಕಳೆದ 10 ತಿಂಗಳಿನಿಂದ ಒಂದೇ ಒಂದು ನಾಟಕ ಪ್ರದರ್ಶನ ನಡೆದಿಲ್ಲ. ಇದರಿಂದಾಗಿ ಸಹಸ್ರಾರು ಕಲಾವಿದರ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದೆ. ಪ್ರತಿ ಕಲಾವಿದರನ್ನು ಅವಲಂಬಿಸಿ ಅವರ ಕುಟುಂಬವಿದ್ದು, ದಿಕ್ಕು ತೋಚದಂತಾಗಿದೆ.
ಆದ್ದರಿಂದ ಉಡುಪಿ ಜಿಲ್ಲೆಯ ವೃತ್ತಿಪರ ನಾಟಕ ತಂಡಗಳ ಪರವಾಗಿ ಸಮಾಜರತ್ನ ಲೀಲಾಧರ ಶೆಟ್ಟಿ ಕರಂದಾಡಿ ಮುಂದಾಳತ್ವದಲ್ಲಿ
ಜಿಲ್ಲಾಧಿಕಾರಿ ಜಿ. ಜಗದೀಶ್ ಅವರಿಗೆ ನಾಟಕ ಪ್ರದರ್ಶನಕ್ಕೆ ಅನುಮತಿ ಯಾಚಿಸಿ ಮನವಿ ನೀಡಲಾಯಿತು.
ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಯವರು, ಸರಕಾರದ ಕೋವಿಡ್ 19 ನಿಯಮಾವಳಿ ಪಾಲಿಸಿಕೊಂಡು, ನಾಟಕ ಪ್ರದರ್ಶನ ನಡೆಸಲು ಅನುಮತಿ ನೀಡಿದ್ದಾರೆ. ಈ ಸಂದರ್ಭ ಪ್ರಸನ್ನ ಶೆಟ್ಟಿ ಬೈಲೂರು, ಕಾಪು ರಂಗತರಂಗ ತಂಡದ ಶರತ್ ಉಚ್ಚಿಲ ಹಾಗೂ ಮರ್ವಿನ್ ಶಿರ್ವ, ತೆನಾಲಿ ಕಾರ್ಕಳ ತಂಡದ ಸುನಿಲ್ ನೆಲ್ಲಿಗುಡ್ಡೆ, ಅಭಿನಯ ಕಲಾವಿದರು ಉಡುಪಿ ತಂಡದ ಉಮೇಶ್ ಅಲೆವೂರು,
ಕಾರ್ತಿಕ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
08/12/2020 05:07 pm