ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಸ್ವಚ್ಛತಾ ಸೇವಾ ಕೈಂಕರ್ಯದಲ್ಲಿ ಮಂಗಳಮುಖಿಯರ ಸಾಥ್; ಗೌರವಾರ್ಪಣೆ

ಉಡುಪಿ: ವಿಶಿಷ್ಟ ಕಾರ್ಯಕ್ರಮವೊಂದಕ್ಕೆ ಉಡುಪಿಯ ಕೋಟ ನಿನ್ನೆ ಸಾಕ್ಷಿಯಾಯಿತು.ಸಮಾಜದಿಂದ ನಿರ್ಲಕ್ಷ್ಯಕ್ಕೊಳಗಾದ ಮಂಗಳಮುಖಿಯರು ಗಿಡ ನೆಟ್ಟು, ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾದರು.ಹೀಗೆ ಸಮಾಜಮುಖಿ ಕಾರ್ಯದಲ್ಲಿ ಪಾಲ್ಗೊಂಡವರನ್ನು ಸನ್ಮಾನಿಸುವ ಕಾರ್ಯಕ್ರಮ ನಡೆಯಿತು.

ಪಂಚವರ್ಣ ಯುವಕ ಮಂಡಲದ ವಾರದ ಸ್ವಚ್ಛತಾ ಕಾರ್ಯಕ್ರಮ ಇದು. 63ನೇ ವಾರದ ಸ್ವಚ್ಛತಾ ಕಾರ್ಯಕ್ರಮವನ್ನು ಭಿನ್ನವಾಗಿ ಆಯೋಜಿಸಲಾಗಿತ್ತು. ಪ್ರತಿ ಭಾನುವಾರ ಪಂಚವರ್ಣ ಯುವಕ ಮಂಡಲ ಸ್ವಚ್ಛತಾ ಕಾರ್ಯಕ್ರಮ ನಡೆಸುತ್ತಿದೆ.

ಸ್ಥಳೀಯ ಸಂಘಟನೆಗಳೊಂದಿಗೆ ಕೋಟದ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಣೈ ಮಾರ್ಗದರ್ಶನದಲ್ಲಿ ನಿನ್ನೆ ಮಂಗಳಮುಖಿಯರು ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸುವ ಮೂಲಕ ಮಾದರಿಯಾದರು.

ಈ ಸಂದರ್ಭ ಐದು ಮಂದಿ ಮಂಗಳಮುಖಿಯರಿಗೆ ಕೋಟ ಶ್ರೀ ಹಿರೇಮಹಾಲಿಂಗೇಶ್ವರ ದೇವಳದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.

ಗಿಳಿಯಾರು ಯುವಕ ಮಂಡಲ,ವಿಪ್ರ ಮಹಿಳಾ ಬಳಗ ಸಾಲಿಗ್ರಾಮ,ಮಣೂರು ಫ್ರೆಂಡ್ಸ್,ಯಕ್ಷ ಸೌರಭ ಕಲಾರಂಗ ಕೋಟ,ಗೀತಾನಂದ ಫೌಂಡೇಶನ್ ಮಣೂರು,ಬಾಳೆಬೆಟ್ಟು ಫ್ರೆಂಡ್ಸ್ ಮಣೂರು ಸಹಯೋಗದಲ್ಲಿ ಈ ಕಾರ್ಯಕ್ರಮ ಸಂಪನ್ನಗೊಂಡಿತು.

Edited By : Manjunath H D
Kshetra Samachara

Kshetra Samachara

07/12/2020 10:10 am

Cinque Terre

23.35 K

Cinque Terre

0