ಉಡುಪಿ: ಕರಾವಳಿಯ ಜಾನಪದ ಕಲೆಯಾದ ಕಂಬಳಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಕಂಬಳ ಪ್ರಿಯರಿಗೆ ಹರ್ಷವೋ ಹರ್ಷ. ಈ ಹಿನ್ನೆಲೆಯಲ್ಲಿ ಇಂದು ಉಡುಪಿ ಜಿಲ್ಲೆಯ ವಂಡಾರು ಕಂಬಳ ಅತಿ ವಿಜೃಂಭಣೆಯಿಂದ ನಡೆಯುತ್ತಿದೆ, ಕಂಬಳದ ಹೋರಿಗಳನ್ನು ಪಳಗಿಸಿ ಕೆಸರುಗದ್ದೆಯಲ್ಲಿ ಅವುಗಳನ್ನು ರೇಸಿಗೆ ಬಿಟ್ಟು ಭಕ್ತಿಭಾವದಲ್ಲಿ ಕಂಬಳದ ಆಚರಣೆ ನಡೆದುಕೊಂಡು ಬಂದಿದೆ.
ಸಾವಿರಾರು ವರ್ಷದ ಇತಿಹಾಸವಿರುವ ವಂಡಾರು ಕಂಬಳ ಪ್ರಾಮುಖ್ಯವಾಗಿ ಇಲ್ಲಿಯ ಜನರ ಮನದಲ್ಲಿ ಮನೆಮಾಡಿದೆ. ಈ ಕಂಬಳ ಬಲು ವಿಜೃಂಭಣೆಯಿಂದ ನಡೆಯುತ್ತಿದ್ದು, ಕರಾವಳಿಯ ಜನರು ಪುಲ್ ಖುಷ್ ಆಗಿದ್ದಾರೆ. ಕಂಬಳ ಪ್ರಿಯರಿಗೆ ಎಲ್ಲಿಲ್ಲದ ಸಂತೋಷ ಎರಡು ಎದುರಾಗಿದ್ದು ತಮ್ಮ ಭಕ್ತಿಯ ಆಚರಣೆಗೆ ಸಕಲ ಸಿದ್ಧತೆಯನ್ನು ಮಾಡಿ ಗದ್ದೆಯಲ್ಲಿ ಕೋಣಗಳನ್ನು ರೇಸಿಗೆ ಬಿಟ್ಟು ಸಂತಸ ವ್ಯಕ್ತಪಡಿಸಿದ್ದಾರೆ.
ಹಾಗೂ ಕಂಬಳದ ಗದ್ದೆಗೆ ಹೋಗುವ ಮುನ್ನ ಮನೆಯ ಯಜಮಾನನ ಜೊತೆಗೆ ತುಳಸಿ ಕಟ್ಟಿಗೆ ಹೋರಿಗಳು ಪ್ರದಕ್ಷಿಣೆ ಹಾಕಿ ಭಕ್ತಿ ಪೂರಕವಾದ ಸಾಂಪ್ರದಾಯಕ ಆಚರಣೆಯನ್ನು ಕೈಗೊಳ್ಳುವುದು ರೂಢಿಯಲ್ಲಿದೆ. ಇಂದು ವಂಡಾರು ಕಂಬಳ ಕ್ಕೆ ಸಾವಿರಾರು ಜನ ಭೇಟಿ ನೀಡಿ ಕಂಬಳವನ್ನು ವೀಕ್ಷಣೆ ಮಾಡಿದ್ದಾರೆ.
Kshetra Samachara
06/12/2020 11:38 am