ವರದಿ: ಸಂದೇಶ್ ಶೆಟ್ಟಿ ಆಜ್ರಿ ಪಬ್ಲಿಕ್ ನೆಕ್ಸ್ಟ್ ಉಡುಪಿ
ಉಡುಪಿ: ಕರಾವಳಿಯ ಗಂಡುಕಲೆ ಯಕ್ಷಗಾನ ತನ್ನದೇ ಆದ ವೈಶಿಷ್ಟ್ಯ ಸಾಂಪ್ರದಾಯ, ಹಾಗೂ ಆಚಾರ ವಿಚಾರಗಳನ್ನು ಒಳಗೊಂಡಿದೆ.
ಕರಾವಳಿ ಯಕ್ಷ ಪ್ರೇಕ್ಷಕರ, ಭಕ್ತಿಭಾವ ಪೂರ್ವಕವಾದ ಕಲಾಸೇವೆಯೇ ಯಕ್ಷಗಾನ. ಕಟೀಲು ಮೇಳದಲ್ಲಿ ಚಿರಪರಿಚಿತರಾದ ಪಟ್ಲ ಸತೀಶ್ ಶೆಟ್ಟಿ ಕಟೀಲು ಮೇಳದಿಂದ ಹೊರಗೆ ಬಂದು ಪಾವಂಜೆ ಎನ್ನುವ ಮೇಳ ಕಟ್ಟಿ ಯಶಸ್ವಿಯಾಗಿದ್ದಾರೆ.
ಸರಳ ಸಜ್ಜನ ಕಲಾದೇವಿಯ ಆರಾಧಕ ಪಟ್ಲ ಸತೀಶ್ ಶೆಟ್ಟಿ ಕಟೀಲು ಮೇಳದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿ ಶ್ರೀ ತಾಯಿಯ ಕೃಪೆಗೆ ಪಾತ್ರರಾಗಿದ್ದರು.
ಆದರೆ ಮೇಳದ ಒಳಗಡೆ ಹಲವು ಗೊಂದಲಗಳಿಗೆ ಒಳಗಾಗಿ ಮೇಳದಿಂದ ನಿರ್ಗಮಿಸಿ ಇದೀಗ ಪಾವಂಜೆ ಕ್ಷೇತ್ರದಲ್ಲಿ ಹೊಸ ಯಕ್ಷಗಾನ ತಂಡವನ್ನು ಪ್ರಾರಂಭಿಸಿ ಯಶಸ್ವಿ ಯತ್ತ ಮುನ್ನುಗ್ಗುತ್ತಿದ್ದಾರೆ.
ಒಂದು ವರ್ಷದ ಸೇವೆಯ ಆಟಗಳು ಈಗಾಗಲೇ ಮೇಳಕ್ಕೆ ಬುಕ್ ಆಗಿದ್ದು ನಿನ್ನೆ ಉಡುಪಿ ಜಿಲ್ಲೆಯ ಕುಂದಾಪುರದ ಕೋಟೇಶ್ವರ ಕಟ್ಟಕೇರಿಯಲ್ಲಿ ಪ್ರಥಮ ಸೇವೆಯಾಟ ನೆರೆದಿತ್ತು , ಈ ಸಂದರ್ಭದಲ್ಲಿ ನಿರೀಕ್ಷೆಗೂ ಮೀರಿ ಸಾವಿರಾರು ಪ್ರೇಕ್ಷಕರು ಪಟ್ಲ ಸತೀಶ್ ಶೆಟ್ಟಿ ತಂಡವನ್ನು ನೋಡಲು ಆಗಮಿಸಿದ್ದರು.
ಶ್ರೀ ದೇವಿ ಮಹಾತ್ಮೆ ಪ್ರಸಂಗವನ್ನು ಆಯ್ದ ಯಕ್ಷಗಾನ ತಂಡ ಭರ್ಜರಿಯ ಪ್ರದರ್ಶನವನ್ನು ನೀಡಿ ಪ್ರೇಕ್ಷಕರನ್ನು ಹುಚ್ಚೆಬ್ಬಿಸಿದೆ.
ಸಂಜೆ 6:00 ಗಂಟೆಗೆ ಪ್ರಾರಂಭವಾದ ಯಕ್ಷಗಾನ ಪ್ರದರ್ಶನ ರಾತ್ರಿ ಹನ್ನೆರವರೆಗೆ ನಡೆಯಿತು.
ಆದರೆ ಸಾವಿರಾರು ಯಕ್ಷ ಪ್ರೇಕ್ಷಕರು ಕುಂತಲ್ಲೇ ಕುಂತು ಯಕ್ಷಗಾನವನ್ನು ಪೂರ್ತಿಯಾಗಿ ವೀಕ್ಷಣೆ ಮಾಡಿದ್ದು ಇನ್ನಷ್ಟು ಯಕ್ಷಗಾನಕ್ಕೆ ಪ್ರೋತ್ಸಾಹ ನೀಡಿದಂತೆ ಕಂಡುಬಂದಿದೆ.
ಸಾಕಷ್ಟು ಅವಮಾನ ಅಪಮಾನಗಳನ್ನು ಎದುರಿಸಿದ ಪಟ್ಲ ಸತೀಶ್ ಶೆಟ್ಟಿ ತನ್ನದೆಯಾದ, ಹೊಸ ಯಕ್ಷಗಾನ ತಂಡವನ್ನು ಕಟ್ಟಿಕೊಂಡು ಮತ್ತೆ ಕಲಾದೇವಿಯ ಸೇವೆಗೆ ಸಿದ್ಧರಾಗಿದ್ದಾರೆ. ಈ ಕಲಾವಿದನ ಯಕ್ಷಗಾನ ಸೇವೆಗೆ ಪ್ರೇಕ್ಷಕರ ಇನ್ನಷ್ಟು ಬೆಂಬಲ ದೊರಕಲಿ ಎನ್ನುವುದೇ ನಮ್ಮ ಆಶಯ.
Kshetra Samachara
29/11/2020 05:05 pm