ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಬಪ್ಪನಾಡು ದೇವಳದಲ್ಲಿ ಸಂಭ್ರಮದ ತುಳಸಿ ಪೂಜಾ ಮಹೋತ್ಸವ

ಮುಲ್ಕಿ: ಮೂಲ್ಕಿಯ ಇತಿಹಾಸ ಪ್ರಸಿದ್ಧ ಒಂಭತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ತುಳಸಿ ಪೂಜಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಈ ಸಂದರ್ಭ ದೇವರ ಉತ್ಸವ ಬಲಿ ಹಾಗೂ ಬಪ್ಪನಾಡು ಯುವಕ ವೃಂದದ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು..

ದೇವಳದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ದೀಪಾರಾಧನೆ ನಡೆಯಿತು. ಈ ಸಂದರ್ಭ ದೇವಳದ ತಂತ್ರಿಗಳಾದ ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.

ಅವರು ಮಾತನಾಡಿ ಕೊರೋನಾ ಮಹಾಮಾಯಿಂದ ವಿಶ್ವವೇ ತಲ್ಲಣಗೊಂಡಿದ್ದು ಸರಕಾರದ ನಿಯಮಗಳನ್ನು ಪಾಲಿಸಿಕೊಂಡು ಮುಂಬರುವ ಉತ್ಸವ ಹಬ್ಬ-ಹರಿದಿನಗಳಲ್ಲಿ ದೇವಳದಲ್ಲಿ ಭಕ್ತರು ಎಚ್ಚರಿಕೆವಹಿಸಿ ಸ್ವಚ್ಛತೆ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗಿದೆ.

ದೇವರು ಎಲ್ಲರಿಗೂ ಆಯುರಾರೋಗ್ಯ ಐಶ್ವರ್ಯ ಗಳನ್ನು ನೀಡುವುದರ ಮೂಲಕ ವಿಶ್ವ ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಿದರು. ಈ ಸಂದರ್ಭ ಮುಲ್ಕಿ ಠಾಣೆ ಯಿಂದ ವರ್ಗಾವಣೆ ಗೊಳ್ಳುತ್ತಿರುವ ಸರ್ಕಲ್ ಇನ್ಸ್ಪೆಕ್ಟರ್ ಜಯರಾಮ ಗೌಡ ರವರನ್ನು ಗೌರವಿಸಲಾಯಿತು.

ದೇವಳದ ಅರ್ಚಕ ರಾದ ನರಸಿಂಹ ಭಟ್ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ಅಚ್ಚುತ ಭಟ್ ಪಾವಂಜೆ, ನಾಗಸ್ವರ ವಾದಕ ನಾಗೇಶ್ ಬಪ್ಪನಾಡು, ದೇವಳದ ಸಿಬ್ಬಂದಿ ಶಿವಶಂಕರ್, ಗೋಪಾಲಕೃಷ್ಣ ಭಟ್ , ಸಮಾಜಸೇವಕ ಪುರಂದರ ಸಾಲಿಯಾನ್, ಮುಲ್ಕಿ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಸುಧೀರ್, ಪ್ರಮೋದ್ ಮತ್ತಿತರರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

28/11/2020 08:33 am

Cinque Terre

11.87 K

Cinque Terre

1