ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮುಂಬೈ ದಾಳಿಯಲ್ಲಿ ಮೃತಪಟ್ಟ ಹುತಾತ್ಮರಿಗೆ ನುಡಿ ನಮನ

ಮಂಗಳೂರು: ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ವೀರ ಸೈನಿಕರು ಹಾಗೂ ಬಲಿಯಾದ ಅಮಾಯಕರನ್ನ‌ ಸ್ಮರಿಸುವ ನಿಟ್ಟಿನಲ್ಲಿ ನಗರದ ಕದ್ರಿಯಲ್ಲಿರುವ ಹುತಾತ್ಮ ಸ್ಮಾರಕದಲ್ಲಿ ರಾಷ್ಟ್ರೀಯ ಕ್ರೈಸ್ತ ವೇದಿಕೆಯಡಿ ಹುತಾತ್ಮರಿಗೆ ನುಡಿ ನಮನ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಭಾರತೀಯ ಭೂಸೇನೆ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಗ್ರೇಶಿಯನ್ ಸಿಕ್ವೇರ ಮಾತನಾಡಿ, ದೇಶಕ್ಕಾಗಿ ಸೈನ್ಯ ಸೇರಿ ವೀರಮರಣವನ್ನಪ್ಪಿದರೆ ಅದೊಂದು ಗೌರವದ ಸಂಕೇತ. ಪ್ರತೀ ಹೆತ್ತವರು ತಮ್ಮ‌ ಮಕ್ಕಳನ್ನ ಸೈನ್ಯಕ್ಕೆ ಸೇರಿಸುವುದನ್ನ ಬೆಂಬಲಿಸಬೇಕು ಎಂದರು. ನವ ಸಹಜ ಸಮುದಾಯದ ಲೈಂಗಿಕ ಅಲ್ಪಸಂಖ್ಯಾಕರು, ಮಂಗಳಾ ಫ್ರೆಂಡ್ಸ್ ಸರ್ಕಲ್ ಸದಸ್ಯರು ಪಾಲ್ಗೊಂಡು ಪಾಲ್ಗೊಂಡು ದೀಪ ಬೆಳಗಿ, ಹುತಾತ್ಮ ಸ್ಮಾರಕಕ್ಕೆ ಪುಷ್ಪ ಗುಚ್ಛ ಅರ್ಪಿಸಿ ಗೌರವ ಸಲ್ಲಿಸಿದರು. ಈ ಸಂದರ್ಭ ಮೇಯರ್ ದಿವಾಕರ್ ಪಾಂಡೇಶ್ವರ, ಮುಡಾ ಅಧ್ಯಕ್ಷ ರವಿಶಂಕರ್ ಮಿಜಾರ್, ವೇದಿಕೆಯ ಸ್ಥಾಪಕ ಫ್ರಾಂಕ್ಲಿನ್ ಮೊಂತೆರೋ, ಮೇಜರ್ ಚೈತನ್ಯ ಹಾಗೂ ಹಲವಾರು ಮಂದಿ ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

27/11/2020 01:09 pm

Cinque Terre

12.12 K

Cinque Terre

1

ಸಂಬಂಧಿತ ಸುದ್ದಿ