ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಶ್ರೀ ಕ್ಷೇತ್ರ ಕಟೀಲಿನಲ್ಲಿ ಪಲಿಮಾರು ಮಠಾಧೀಶರಿಂದ ತಪ್ತಮುದ್ರಾಧಾರಣೆ

ಮುಲ್ಕಿ: ಶ್ರೀ ಕ್ಷೇತ್ರ ಕಟೀಲಿನಲ್ಲಿ ಗುರುವಾರ ಏಕಾದಶಿಯಂದು ಪೂರ್ವಾಹ್ನ ತಪ್ತಮುದ್ರಾಧಾರಣೆ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಂದ ನಡೆಯಿತು.

ಈ ಸಂದರ್ಭ ಅವರು ಆಶೀರ್ವಚನ ನೀಡಿ, ತಪ್ತಮುದ್ರಾಧಾರಣೆಯ ಹಿಂದೊಂದು ವಿಜ್ಞಾನವಿದೆ. ಕಾಯಾ, ವಾಚಾ, ಮನಸಾ ಸಾಧನೆಗೆ ನಶ್ವರವಾದ ಶರೀರವೇ ವೇದಿಕೆ. ದೇವತಾರಾಧನೆ, ಯಜ್ಞ, ಆವಾಹನೆ, ಶ್ರವಣ, ಮನನ, ನಿಧಿಧ್ಯಾನಕ್ಕೂ ಶರೀರವೇ ಆಧಾರ. ಶರೀರವನ್ನು ಶುದ್ಧೀಕರಿಸುವ ಪ್ರಕ್ರಿಯೆಯೇ ಮುದ್ರಾಧಾರಣೆ ಎಂದರು.

ಕೊರೊನಾ ಮಹಾಮಾರಿ ಯಿಂದ ವಿಶ್ವವೇ ತಲ್ಲಣಗೊಂಡಿದ್ದು, ಸ್ವಚ್ಛತೆ ಮೂಲಕ ಸರಕಾರದ ನಿಯಮ ಪಾಲಿಸಿಕೊಂಡು ಕೊರೊನಾ ನಿರ್ಮೂಲನೆಗೆ ಸಹಕರಿಸೋಣ ಎಂದರು.

ಈ ಸಂದರ್ಭ ಕಟೀಲು ದೇವಳದ ಅನುವಂಶಿಕ ಮೊಕ್ತೇಸರರಾದ ವಾಸುದೇವ ಆಸ್ರಣ್ಣ, ಹರಿನಾರಾಯಣ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ, ಕಮಲಾದೇವಿ ಆಸ್ರಣ್ಣ ಮತ್ತಿತರರು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

26/11/2020 05:45 pm

Cinque Terre

6.73 K

Cinque Terre

0