ಉಡುಪಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಪೊಲೀಸ್ ಠಾಣೆ ಉಡುಪಿ, ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ , ಕೃಷ್ಣಾನುಗ್ರಹ ಸಂತೆಕಟ್ಟೆ ಸಹಯೋಗದಲ್ಲಿ ಅಂತಾರಾಷ್ಟ್ರೀಯ ದತ್ತು ಮಾಸಾಚರಣೆ-2020 ಮಡಿಲ ಬೆಳಗು ದತ್ತು ಕಾರ್ಯಕ್ರಮ ಹಾಗೂ ಪರಿತ್ಯಕ್ತ ನವಜಾತ ಶಿಶುವಿನ ನಾಮಕರಣ ಕೃಷ್ಣಾನುಗ್ರಹ ಸಂಸ್ಥೆ ಸಂತೆಕಟ್ಟೆಯಲ್ಲಿ ಜರುಗಿತು.
ಉಡುಪಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ ಉದ್ಘಾಟಿಸಿ, ಮಗುವಿನ ಸಂರಕ್ಷಣೆ ಎಲ್ಲರ ಹೊಣೆ. ಶಿಶುವನ್ನು ತೊಟ್ಟಿಗೆ ಹಾಕದೆ ತೊಟ್ಟಿಲಿಗೆ ಹಾಕಿ ಎಂದರು. ಅಧ್ಯಕ್ಷತೆಯನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸದಾನಂದ ನಾಯಕ್ ವಹಿಸಿ, ಕಾನೂನು ಬದ್ಧ ದತ್ತು ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದರು.
ಅತಿಥಿಗಳಾದ ವೈಲೆಟ್ ಫೆಮಿನಾ ಉಪನಿರೀಕ್ಷಕರು ಮಹಿಳಾ ಪೊಲೀಸ್ ಠಾಣೆ ಉಡುಪಿ, ಡಾ. ಉಮೇಶ್ ಪ್ರಭು ಅಧ್ಯಕ್ಷರು ಶ್ರೀ ಕೃಷ್ಣ ಚಾರಿಟೇಬಲ್ ಟ್ರಸ್ಟ್ , ನಿತ್ಯಾನಂದ ಒಳಕಾಡು ಕಾರ್ಯದರ್ಶಿ ಜಿಲ್ಲಾ ನಾಗರಿಕ ಸೇವಾ ಸಮಿತಿ, ರಾಮಚಂದ್ರ ಉಪಾಧ್ಯ ನಿರ್ದೇಶಕರು ಮಕ್ಕಳ ಸಹಾಯವಾಣಿ ಉಪಸ್ಥಿತರಿದ್ದರು.
Kshetra Samachara
25/11/2020 04:51 pm