ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪೊಲೀಸ್ ಸೋಮಪ್ಪ ನಾಯ್ಕ್ ರಿಗೆ ವರ್ಗಾವಣೆ, ಬೀಳ್ಕೊಡುಗೆ

ಮಂಗಳೂರು: ಪೊಲೀಸ್ ಇಲಾಖೆಯಲ್ಲಿ ಸುಮಾರು 34 ವರ್ಷಗಳ ಕಾಲ ಸೇವೆ ಸಲ್ಲಿಸಿ ಇದೀಗ ಉಡುಪಿ ಜಿಲ್ಲೆಯ ಮಲ್ಪೆ ಕಾವಲು ಪಡೆಯ ಆರ್ ಪಿಐಗೆ ವರ್ಗಾವಣೆಗೊಂಡ ಸೋಮಪ್ಪ ನಾಯ್ಕ್ ಅವರಿಗೆ ಬೀಳ್ಕೊಡುಗೆ ಸಮಾರಂಭ ಮಂಗಳೂರಿನ ಐಜಿಪಿ ಕಚೇರಿಯಲ್ಲಿ ನಡೆಯಿತು.

ಐಜಿಪಿ ಕಚೇರಿಯ ಪಶ್ಚಿಮ ವಲಯ ಕೇಂದ್ರ ಸ್ಥಾನದ ಡಿವೈಎಸ್ಪಿ ಶಂಕರ್ ಮಾರಿಹಾಳ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.

ಬೆರಳಚ್ಚು ತಜ್ಞ ಡಿವೈಎಸ್ಪಿ ಗಿರೀಶ್, ಐಜಿಪಿ ವಲಯ ಕೇಂದ್ರ ಸ್ಥಾನದ ಇನ್ಸ್ ಪೆಕ್ಟರ್ ನಾಗೇಶ್ ಕದ್ರಿ ಅವರು ವರ್ಗಾವಣೆಗೊಂಡ ಸೋಮಪ್ಪ ನಾಯ್ಕ್ ರ ಜೊತೆಗಿನ ಆತ್ಮೀಯತೆ ಸ್ಮರಿಸಿಕೊಂಡರು. ಕಳೆದ 7 ವರ್ಷಗಳಿಂದ ಮಂಗಳೂರಲ್ಲಿ ಬಾಂಬ್ ನಿಷ್ಕ್ರಿಯ ದಳದಲ್ಲಿಯೂ ಸೋಮಪ್ಪ ನಾಯ್ಕ್ ಸೇವೆ ಸಲ್ಲಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

22/11/2020 05:13 pm

Cinque Terre

20.64 K

Cinque Terre

1

ಸಂಬಂಧಿತ ಸುದ್ದಿ