ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕಡಲನಗರಿಯಲ್ಲಿ ಫ್ಯಾಷನ್ ಝಲಕ್

ಮಂಗಳೂರು: ಕಡಲನಗರಿಯಲ್ಲಿ ಫ್ಯಾಷನ್ ಲೋಕ ಮತ್ತಷ್ಟು ರಂಗು ಪಡೆಯುತ್ತಿದೆ. ಹೌದು. ಮಂಗಳೂರಿನ ಟೀಮ್ ಫ್ಯಾಷನ್ ಎಬಿಸಿಡಿ ಸಂಸ್ಥೆ ಇತ್ತೀಚೆಗೆ ಮಂಗಳೂರಿನ ಅಬ್ಬಕ್ಕ ಕ್ವೀನ್ ಕ್ರೂಸ್​ನಲ್ಲಿ ಮಿಸ್ ಇಂಡಿಯಾ- ಮಿಸ್ ಸೂಪರ್ ಟ್ಯಾಲೆಂಟ್- ಸೀಸನ್ 4 ಮತ್ತು ಮಿಸ್ಟರ್ ಇಂಡಿಯಾ ಸೀಸನ್ 3 ಫ್ಯಾಷನ್ ಪೆಜೆಂಟ್ ಆಯೋಜಿಸಿತ್ತು.

ಈ ಫ್ಯಾಶನ್ ಪೆಜೆಂಟ್ ನ ಮಿಸ್ ಇಂಡಿಯಾ ಸೂಪರ್ ಟ್ಯಾಲೆಂಟ್​​​​ನಲ್ಲಿ ವಿಜೇತರಾದ ಪೂಜಾ ಕಿರೀಟ ಮುಡಿಗೇರಿಸಿಕೊಂಡರು.

ಮಿಸ್ ಇಂಡಿಯಾ ವರ್ಲ್ಡ್ ಸೂಪರ್ ಮಾಡೆಲ್​​ನಲ್ಲಿ ವರ್ಷಾ ಲೋಬೊ ವಿಜೇತರಾದರು. ಮಿಸ್ಟರ್ ಇಂಡಿಯಾ ಟೈಟಲ್​​ನಲ್ಲಿ ಮಿಸ್ಟರ್ ಇಂಡಿಯಾ ವಿನ್ನರ್ ಆಗಿ ಕ್ಲೈವ್ ಮಾರ್ಷ್, ಮಿಸ್ಟರ್ ಇಂಡಿಯಾ ವರ್ಲ್ಡ್‌ ಸೂಪರ್ ಮಾಡೆಲ್ ಆಗಿ ಸ್ಕಂದ ಎನ್. ಆಯ್ಕೆಯಾಗಿದ್ದಾರೆ.

ಇಲ್ಲಿ ಆಯ್ಕೆಯಾದವರು 2021ರ ಸೆಪ್ಟೆಂಬರ್​​ನಲ್ಲಿ ಥಾಯ್ಲೆಂಡ್​​ನ ಪಟಾಯದಲ್ಲಿ ನಡೆಯುವ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

21/11/2020 07:56 pm

Cinque Terre

31.11 K

Cinque Terre

0

ಸಂಬಂಧಿತ ಸುದ್ದಿ