ಮೂಡುಬಿದಿರೆ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ, ದಲಿತ, ಕಾರ್ಮಿಕ ಮತ್ತು ಜನವಿರೋಧಿ ಮಸೂದೆಗಳನ್ನು ಜಾರಿಗೊಳಿಸಿದೆ ಎಂದು ಆರೋಪಿಸಿ ಹಾಗೂ ಅವುಗಳನ್ನು ಹಿಂತೆಗೆಯುವಂತೆ ಆಗ್ರಹಿಸಿ, ಭಾರತೀಯ ಕೃಷಿ ಪರಂಪರೆ ಹಾಗೂ ಸಂಪತ್ತನ್ನು ಉಳಿಸಲು ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ, ರೈತ ದಲಿತ ಕಾರ್ಮಿಕ ಜನಪರ ಚಳವಳಿಗಳ ಒಕ್ಕೂಟದಿಂದ ಮೂಡುಬಿದಿರೆ ಬಸ್ ನಿಲ್ದಾಣದಲ್ಲಿ ವಾಹನ ಜಾಥಾ ಹಾಗೂ ಬಹಿರಂಗ ಸಭೆ ನಡೆಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಯಾದವ ಶೆಟ್ಟಿ, ದೇಶದ ಸಂಪತ್ತನ್ನು ಲೂಟಿ ಹೊಡೆಯಲು ಕೇಂದ್ರ ಸರ್ಕಾರ ಖಾಸಗೀಕರಣ ತಂದಿದೆ. 20 ಲಕ್ಷ ಕೋಟಿ ರೂ.ನ ಕೊರೊನಾ ಪ್ಯಾಕೇಜ್‍ನಲ್ಲಿ 1500 ಲಕ್ಷ ಕೋಟಿ ರೂ.ವನ್ನು ಪ್ರಧಾನಿ ಮೋದಿಯವರು ಗೌತಮ್ ಅದಾನಿಗೆ ನೀಡಿರುವುದು ಖಾಸಗೀಕರಣ ನೀತಿಗೆ ಸ್ಪಷ್ಟ ಉದಾಹರಣೆ. ಬಹುರಾಷ್ಟ್ರ ಕಂಪೆನಿಗಳ ಏಳಿಗೆಗಾಗಿ ಶ್ರಮಿಸುತ್ತಿರುವ ಕೇಂದ್ರ ಸರ್ಕಾರ ಬಡ ಕಾರ್ಮಿಕರ, ರೈತರ ಏಳಿಗೆ ಮರೆತಿದೆ ಎಂದರು.
ಮುಖಂಡರಾದ ಆಲ್ವಿನ್ ಮಿನೇಜಸ್, ರವಿ ಕಿರಣ ಪುಣಚ, ಸುಭಾಶ್ಚಂದ್ರ ಚೌಟ, ಮನೋಹರ ಶೆಟ್ಟಿ, ಲಿಯೋ ವಾಲ್ಟರ್ ನಜರತ್, ರೋನಿ ಮೆಂಡೋನ್ಸ, ರಮಣಿ, ಕೃಷ್ಣಪ್ಪ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
21/11/2020 03:52 pm