ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ದೇವಳ ಜೀರ್ಣೋದ್ಧಾರಕ್ಕೆ ಭಕ್ತರ ನೆರವು ಅಗತ್ಯ: ಹರಿಕೃಷ್ಣ ಪುನರೂರು

ಮುಲ್ಕಿ: ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಧಾರ್ಮಿಕ ಮತ್ತು ದತ್ತಿ ಇಲಾಖೆಯಿಂದ ನೂತನ ವ್ಯವಸ್ಥಾಪನಾ ಸಮಿತಿ ನೇಮಕವಾಗಿದ್ದು, ಅದರಂತೆ ವ್ಯವಸ್ಥಾಪನ ಸಮಿತಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ನೂತನ ಅಧ್ಯಕ್ಷರಾಗಿ ಹರಿದಾಸ ಭಟ್ ತೋಕೂರು ಆಯ್ಕೆಯಾದರು.

ಸದಸ್ಯರಾಗಿ ಅರ್ಚಕ ಮಧುಸೂದನ್ ಆಚಾರ್, ವಿಪುಲ ಡಿ.ಶೆಟ್ಟಿಗಾರ್, ಶಾರದಾ ಜಿ.ಬಂಗೇರ, ವಿಶ್ವನಾಥ ಸಾಲ್ಯಾನ್, ಲೋಕಯ್ಯ ಸಾಲ್ಯಾನ್, ಬಿ.ಪುರುಷೋತ್ತಮ ರಾವ್, ವಿಜಯಕುಮಾರ್ ರೈ, ಯೋಗೀಶ ಆರ್. ಕೋಟ್ಯಾನ್ ಮತ್ತಿತರರು ಸೇರಿ ನೂತನ ಅಧ್ಯಕ್ಷರ ಆಯ್ಕೆ ನಡೆಸಿದರು. ಬಳಿಕ ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರಿಕೃಷ್ಣ ಪುನರೂರು ಹಾಗೂ ಆಡಳಿತಾಧಿಕಾರಿ ಪ್ರವೀಣ್ ನೇತೃತ್ವದಲ್ಲಿ ನೂತನ ಅಧ್ಯಕ್ಷ ಹರಿದಾಸ್ ಭಟ್ ಅವರಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಈ ಸಂದರ್ಭ ಹರಿಕೃಷ್ಣ ಪುನರೂರು ಮಾತನಾಡಿ, ದೇವಳದ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯವಾಗಿದ್ದು ನೂತನ ಅಧ್ಯಕ್ಷರಿಗೆ ಎಲ್ಲಾ ವಿಧದಲ್ಲೂ ಸಹಕಾರ ನೀಡಲು ವಿನಂತಿಸಿದರು. ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಧಾರ್ಮಿಕ ಪರಿಷತ್ ಸದಸ್ಯರಾದ ಭುವನಾಭಿರಾಮ ಉಡುಪ, ಜಿಪಂ ಸದಸ್ಯ ವಿನೋದ್ ಬೊಳ್ಳೂರು, ಜೀರ್ಣೋದ್ಧಾರ ಸಮಿತಿ ಸದಸ್ಯರಾದ ರತ್ನಾಕರ ಶೆಟ್ಟಿ ಗಾರ ಯಾನೆ ಕಾಂತಣ್ಣ ಗುರಿಕಾರ,ಗುರುರಾಜ್ ಎಸ್. ಪೂಜಾರಿ, ಮೋಹನದಾಸ್, ಹರಿ ಪ್ರಸಾದ್ ಜಿ.ಶೆಟ್ಟಿ, ಸ್ಥಳೀಯರಾದ ಸುಬ್ರಹ್ಮಣ್ಯ ರಾವ್, ಗೋಪಾಲ ಭಂಡಾರಿ, ಪುರುಷೋತ್ತಮ ಕೋಟ್ಯಾನ್ ಶ್ರೀನಿವಾಸ ಶೆಟ್ಟಿಗಾರ್ ಮತ್ತಿತರರು ಇದ್ದರು.

Edited By : Nagesh Gaonkar
Kshetra Samachara

Kshetra Samachara

20/11/2020 01:28 pm

Cinque Terre

12.17 K

Cinque Terre

0

ಸಂಬಂಧಿತ ಸುದ್ದಿ