ಮಂಗಳೂರು: ಅಯೋಧ್ಯೆಯಲ್ಲಿ ನಿರ್ಮಾಣವಾಗುವ ಶ್ರೀರಾಮ ಮಂದಿರದ ನಿರ್ಮಾಣಕ್ಕೆ ಪ್ರಧಾನಿ ಮೋದಿ ಎರಡು ಸಲಹೆಯನ್ನು ನೀಡಿದ್ದು ಮಂದಿರ ನಿರ್ಮಾಣದ ವೇಳೆ ಅದು ಕಾರ್ಯರೂಪಕ್ಕೆ ಬರಲಿರುವುದಾಗಿ ಅಯೋಧ್ಯೆ ರಾಮ ಮಂದಿರ ಟ್ರಸ್ಟ್ ನ ವಿಶ್ವಸ್ಥ ಮಂಡಳಿ ಸದಸ್ಯ ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳು ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಮ ನವಮಿಯಂದು ಪ್ರತಿಷ್ಠಾಪಿಸಲಾಗುವ ಶ್ರೀರಾಮ ದೇವರ ಪಾದಕ್ಕೆ ಸೂರ್ಯನ ಸ್ಪರ್ಶ ಬೀಳುವಂತೆ ಮಾಡುವುದು ಮತ್ತು ಭಕ್ತರು ನಮಸ್ಕರಿಸುವ ಸಂದರ್ಭದಲ್ಲಿ ಅದು ದೇವರ ಪಾದವನ್ನ ಮುಟ್ಟಿ ನಮಸ್ಕರಿಸುವಂತೆ ಕಾಣುವ ರೀತಿಯಲ್ಲಿ 3D ತಂತ್ರಜ್ಞಾನ ಬಳಸಿ ನಿರ್ಮಿಸುವಂತೆ ಸೂಚಿಸಿದ್ದರು.
ಈ ಎರಡು ಸಲಹೆಗಳನ್ನು ತಂತ್ರಜ್ಞರ ಮಾರ್ಗದರ್ಶನ ಮಾಡಲು ಸಾಧ್ಯವಿದೆ ಎಂದು ತಿಳಿದಿದ್ದು, ಈ ಎರಡೂ ಯೋಜನೆಯನ್ನ ಎರಡು ತಂತ್ರಜ್ಞಾನ ಸಂಸ್ಥೆಗಳು ನಿರ್ವಹಿಸಲಿದೆ ಎಂದರು.
ಇನ್ನು ಮುಂದಿನ ಜನವರಿ 15 ರಿಂದ ಮಂದಿರ ನಿರ್ಮಾಣಕ್ಕಾಗಿ ಧನ ಸಂಗ್ರಹ ಕಾರ್ಯ ನಡೆಯಲಿದೆ. ಸದ್ಯ ಅಯೋಧ್ಯೆಯಲ್ಲಿ ಭೂಮಿ ಸಮತಟ್ಟು ಮಾಡುವ ಹಾಗೂ ಹಳೆ ಕಟ್ಟಡಗಳನ್ನ ಕೆಡವುವ ಕೆಲಸ ಆಗುತ್ತಿದೆ. ಭೂಮಿ ಧಾರಣಾ ಸಾಮರ್ಥ್ಯ ಪರಿಶೀಲನೆ ಬಳಿಕ ಮಂದಿರ ನಿರ್ಮಾಣ ಕಾರ್ಯ ಸುಸೂತ್ರವಾಗಿ ನಡೆಯಲಿದೆ ಎಂದರು.
Kshetra Samachara
17/11/2020 10:06 pm