ಮುಲ್ಕಿ: ಬಿರುವೆರ್ ಕುಡ್ಲ ಮುಲ್ಕಿ ಘಟಕ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕರತ ಕವಿ, ಯಕ್ಷಗುರು ಗಣೇಶ್ ಕೊಲಕಾಡಿ ಅವರಿಗೆ ಸನ್ಮಾನ ನಡೆಯಿತು.ಸಮಾರಂಭದ ಅಧ್ಯಕ್ಷತೆಯನ್ನು ಬಿರುವೆರ್ ಕುಡ್ಲ ಮುಲ್ಕಿ ಅಧ್ಯಕ್ಷ ಕಿಶೋರ್ ಸಾಲ್ಯಾನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಚಂದ್ರಶೇಖರ ಸುವರ್ಣ ಮಾತನಾಡಿ, ಸಾಧಕರನ್ನು ಗುರುತಿಸಿ, ಗೌರವಿಸುತ್ತಿರುವ ಸಂಘಟನೆ ಕಾರ್ಯ ಶ್ಲಾಘನೀಯ ಎಂದರು. ಸನ್ಮಾನ ಸ್ವೀಕರಿಸಿ ಯಕ್ಷಗುರು ಗಣೇಶ್ ಕೊಲಕಾಡಿ ಮಾತನಾಡಿ, ತಮ್ಮ ಗುರು ಛಂದೋ ಬ್ರಹ್ಮ ದಿ. ಡಾ. ನಾರಾಯಣ ಶೆಟ್ಟಿ ಅವರ ಆದರ್ಶ ಪಾಲಿಸಿ ಜೀವನದಲ್ಲಿ ಕಲೆಯನ್ನು ಸವಾಲಾಗಿ ಸ್ವೀಕರಿಸಿ ಸಾಧನೆಗೆ ಪ್ರೇರಣೆಯಾಗಿದ್ದಾರೆ ಎಂದರು.
ಮುಲ್ಕಿ ವಿಜಯಾ ರೈತ ಸೇವಾ ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ, ಕೊಲಕಾಡಿ ಛಂದ ಬ್ರಹ್ಮ ಟ್ರಸ್ಟ್ ಕಾರ್ಯಾಧ್ಯಕ್ಷ ಸದಾಶಿವ ಶೆಟ್ಟಿಗಾರ್, ಪದಾಧಿಕಾರಿಗಳಾದ ಧನಂಜಯ ಕೊಯಿಲ, ಹರಿರಾಜ ಶೆಟ್ಟಿಗಾರ್,ಗುರುರಾಜ ಉಪಾಧ್ಯಾಯ, ಮಾಜಿ ಪಂ. ಸದಸ್ಯ ಪ್ರಾಣೇಶ್ ಹೆಜಮಾಡಿ, ಬಿರುವೆರ್ ಕುಡ್ಲ ಮುಲ್ಕಿ ಘಟಕ ಪದಾಧಿಕಾರಿಗಳಾದ ಸತೀಶ್ ಕಿಲ್ಪಾಡಿ, ಅಶೋಕ್ ಸುವರ್ಣ, ರಿತೇಶ್ ಅಂಚನ್, ರಕ್ಷಿತ್ ಕೊಳಚಿಕಂಬಳ, ಕೆ.ರಮಾನಾಥ ಸುವರ್ಣ, ಕಿರಣ್ ಕುಮಾರ್ ಬರ್ಕೆ ಕಕ್ವ, ಸಲಹೆಗಾರ ಉಮೇಶ್ ಮಾನಂಪಾಡಿ, ಅನಿಲ್ ಕೊಲಕಾಡಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
16/11/2020 03:33 pm