ಮಂಗಳೂರು: ಹಿಂದುತ್ವದ ಹೆಸರಲ್ಲಿ ಅಧಿಕಾರಕ್ಕೆ ಬಂದವರು ಮುಟ್ಟಿ ನೋಡಿಕೊಳ್ಳುವ ದಿನಗಳು ಶೀಘ್ರವೇ ಬರಲಿದೆ ಎಂದು ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯ ಕಾರ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಹೇಳಿದ್ದಾರೆ. ನಾಥೂರಾಮ್ ಗೋಡ್ಸೆ 71ನೇ ಪುಣ್ಯತಿಥಿ ಆಚರಣೆ ನಡೆಸಿ ಮಾತನಾಡಿದ ಅವರು, ಗೋಡ್ಸೆ ಪುಣ್ಯತಿಥಿಯನ್ನು ಹಿಂದೂ ಮಹಾಸಭಾ 'ಅಖಂಡ ಭಾರತ ಸಂಕಲ್ಪ' ದಿನವಾಗಿ ಆಚರಿಸುತ್ತಾ ಬಂದಿದೆ. ಕಾರಣ, ಅವರೊಬ್ಬ ಅಪ್ರತಿಮ ದೇಶಭಕ್ತರಾಗಿದ್ದರು. ಹಿಂದೂ ಮಹಾಸಭಾದ ಹಲವು ಹಂತಗಳಲ್ಲಿ ದುಡಿದು, ಬಳಿಕ ರಾಷ್ಟ್ರೀಯ ಸ್ವಯಂಸೇವಕ ಸಂಘ ಸೇರಿಕೊಂಡಿದ್ದರು. ಆದರೆ, ಗಾಂಧೀಜಿ ಹತ್ಯೆ ಬಳಿಕ RSS ಅವರನ್ನು ತನ್ನ ಕಾರ್ಯಕರ್ತನಲ್ಲ ಎಂದಿತ್ತು. ಆದರೂ ಹಿಂದೂ ಮಹಾಸಭಾ ಮಾತ್ರ ಆ ರೀತಿಯ ಮನೋಸ್ಥಿತಿ ಹೊಂದಿಲ್ಲ. ಅವರ ಬಲಿದಾನ ವ್ಯರ್ಥ ಮಾಡಲು ಹಿಂದೂ ಮಹಾಸಭಾ ಬಿಡದು. ಇಂದಿನ ಈ ಪುಣ್ಯತಿಥಿ ಅನ್ನೋದು ಮುಂದಿನ ರಾಜಕೀಯ ಬದಲಾವಣೆಗೆ ಮುನ್ನುಡಿ ಬರೆಯಲಿದೆ ಎಂದರು.
Kshetra Samachara
16/11/2020 11:09 am